Breaking
Sat. Apr 20th, 2024

ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಜನತೆಯನ್ನು ಬೆಚ್ಚಿ ಬೀಳಿಸಿದ ಎರಡು ಭೂಕಂಪ

By Mooka Nayaka News Mar 21, 2024
Spread the love

ಮಹಾರಾಷ್ಟ್ರ: ಗುರುವಾರ ಮುಂಜಾನೆ ಮಹಾರಾಷ್ಟ್ರದ ಹಿಂಗೋಲಿ ನಗರದಲ್ಲಿ 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪಗಳು ಸಂಭವಿಸಿವೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, 4.5 ತೀವ್ರತೆಯ ಮೊದಲ ಕಂಪನವು ಸುಮಾರು 06.08 ಗಂಟೆಗೆ ಸಂಭವಿಸಿದ್ದು ಇದಾದ ಹತ್ತು ನಿಮಿಷಗಳಲ್ಲಿ 3.6 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ ಎಂದು ಹೇಳಿದ್ದಾರೆ.

ಭೂಕಂಪದಿಂದ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Related Post