ಮುಂಬೈ : ಬಾಲಿವುಡ್ ಹಿರಿಯ ನಟ – ರಾಜಕಾರಣಿ ಮಿಥುನ್ ಚಕ್ರವರ್ತಿ ಅವರು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಇದು ಸಿನಿಮಾ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಳಿಗಾಗಿ ನೀಡಲಾಗುವ ಅತ್ಯುನ್ನತ ಸರ್ಕಾರಿ ಗೌರವವಾಗಿದೆ.
ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ, ಚೊಚ್ಚಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಕೆಲವೇ ಕೆಲವರಲ್ಲಿ ಒಬ್ಬರು, ಹಿಂದಿ, ಬೆಂಗಾಲಿ, ಭೋಜ್‌ಪುರಿ, ಒಡಿಯಾ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಸಿನಿಮಾ ಕ್ಷೇತ್ರಕ್ಕೆ ಅಗಾಧ ಕೊಡುಯನ್ನು ನೀಡಿದ್ದಾರೆ.
ಮಿಥುನ್ ಚಕ್ರವರ್ತಿ ಅವರು ತಮ್ಮ 74 ನೇ ವಯಸ್ಸಿನಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದು. ಇಂದಿಗೂ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಅಲ್ಲದೆ ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಅವರ ಜನಪ್ರಿಯ ಚಲನಚಿತ್ರಗಳಲ್ಲಿ ಡಿಸ್ಕೋ ಡ್ಯಾನ್ಸರ್, ಮೃಗಯಾ, ಗುಡಿಯಾ, ಗುರು, ಮತ್ತು ಓ ಮೈ ಗಾಡ್ ಸೇರಿವೆ.
ಅಕ್ಟೋಬರ್ 8 ರಂದು ಪ್ರಶಸ್ತಿ ಪ್ರಧಾನ:
ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ವಿಚಾರ ಅದರಂತೆ ಅಕ್ಟೋಬರ್ 8 ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು X ನಲ್ಲಿ ಘೋಷಿಸಿದ್ದಾರೆ.