Trending

ಒಂಟೆಯ ಕಣ್ಣೀರಿಗೆ ಕೋಟಿ ಕೋಟಿ ಬೆಲೆ! ಇದಕ್ಕಿರುವ ಶಕ್ತಿ ಏನು? ವಿಶೇಷತೆ ಏನು?

Spread the love

ದುಬೈ (ಯುಎಇ): ಒಂಟೆಗಳ ಕಣ್ಣೀರಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ. ಒಂಟೆಯ ಕಣ್ಣೀರಿನಲ್ಲಿ ಅಪಾರವಾದ ಶಕ್ತಿ ಇದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಜೀವ ಉಳಿಸಬಲ್ಲ ಶಕ್ತಿ ಒಂಟೆಯ ಕಣ್ಣೀರಿನಲ್ಲಿ ಇದ್ಯಂತೆ.

ಒಂಟೆಯ ಕಣ್ಣೀರು ಹಾವಿನ ವಿಷದ ಪ್ರಭಾವವನ್ನೇ ಕುಗ್ಗಿಸುವಷ್ಟು ಶಕ್ತಿಯುತ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ, ಹಾವಿನ ಕಡಿತದಿಂದ ಸಾವಿನ ಭೀತಿಯಲ್ಲಿ ಇರುವ ಜನರ ರಕ್ಷಣೆಗೆ ಒಂಟೆಯ ಕಣ್ಣೀರು ಸಂಜೀವಿನಿ ಇದ್ದಂತೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಿಧ ರೀತಿಯ ವಿಷಕಾರಿ ಹಾವುಗಳ ಕಡಿತದಿಂದ ಪ್ರತಿ ವರ್ಷ 1 ಲಕ್ಷದ 25 ಸಾವಿರ ಮಂದಿ ವಿಶ್ವಾದ್ಯಂತ ಸಾವನ್ನಪ್ಪುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಹಲವು ಕಾಯಿಲೆಗಳಿಗೆ ದಿವ್ಯೌಷಧ ಒಂಟೆ ಕಣ್ಣೀರು!

ಒಂಟೆ ಕಣ್ಣೀರಿನಿಂದ ಹಲವು ರೀತಿಯ ರೋಗಗಳಿಗೆ ಔಷಧ ತಯಾರಿಸಬಹುದು ಅನ್ನೋ ಸಂಗತಿಯನ್ನ ಯುಎಇ ವಿಶ್ವ ವಿದ್ಯಾಲಯದ ತಜ್ಞರು ಹೇಳಿದ್ದರು. ಈ ಸಂಬಂಧ 2007 ರಿಂದಲೇ ಸಂಶೋಧನಾ ಯೋಜನೆಯೊಂದು ಜಾರಿಯಲ್ಲಿದೆ. ಮಾನವನ ಕಣ್ಣುಗಳಲ್ಲಿ ಕಣ್ಣೀರು ಉತ್ಪಾದಿಸುವುದನ್ನೇ ನಿಲ್ಲಿಸಬಲ್ಲ ಆಟೋ ಇಮ್ಯೂನ್ ರೋಗವೊಂದಕ್ಕೆ ಒಂಟೆಗಳ ಕಣ್ಣೀರು ಮದ್ದು ಆಗಬಲ್ಲದು ಎಂದು ತಿಳಿದು ಬಂದಿದೆ. ಕಣ್ಣೀರು ಉತ್ಪಾದನೆಯ ಸಾಮರ್ಥ್ಯ ನಮ್ಮ ಕಣ್ಣುಗಳಿಗೆ ಇಲ್ಲವಾದರೆ ನಮ್ಮ ಕಣ್ಣುಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕು ವೃದ್ದಿಯಾಗುತ್ತದೆ.

ಒಂಟೆಗಳು ಅತ್ಯಂತ ಪ್ರತಿಕೂಲ ಹವಾಮಾನದಲ್ಲಿ ಬದುಕುತ್ತವೆ. ಹೀಗಾಗಿ, ಒಂಟೆಗಳ ಕಣ್ಣು ಹಾಗೂ ಕಣ್ಣೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವಿವಿಧ ರೀತಿಯ ಸೋಂಕುಗಳ ವಿರುದ್ಧ ಹೋರಾಡಬಲ್ಲ ಶಕ್ತಿ ಇರುತ್ತದೆ. ಹೀಗಾಗಿ, ಒಂಟೆಗಳ ಕಣ್ಣೀರು ಮಾನವನ ಕಣ್ಣುಗಳಲ್ಲಿ ಉಂಟಾಗುವ ಶುಷ್ಕತೆ, ವಿದೇಶಿ ವಸ್ತುಗಳಿಂದ ಆದ ಹಾನಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಆಗಬಲ್ಲದು ಎಂದು ಯುಎವಿ ವಿಶ್ವ ವಿದ್ಯಾಲಯದ ಮಾಜಿ ಪ್ರೊಫೆಸರ್ ವಲ್ಟರ್ ಕೋನ್ಕಾ ಹೇಳಿದ್ದಾರೆ.

ಇನ್ನು ಇವೆಲ್ಲವೂ ಇದೀಗ ಪ್ರಾಥಮಿಕ ಹಂತದಲ್ಲೇ ಇವೆ. ಎಲ್ಲ ವಿಚಾರಗಳೂ ವೈಜ್ಞಾನಿಕ ಸಾಧ್ಯಾ ಸಾಧ್ಯತೆಯ ಚರ್ಚೆಯ ಹಂತದಲ್ಲೇ ಇವೆ. ಸದ್ಯದ ಮಟ್ಟಿಗೆ ಒಂಟೆ ಕಣ್ಣೀರನ್ನು ಸಂಗ್ರಹ ಮಾಡಿ ಅದರ ಕಣ್ಣೀರಿನಲ್ಲಿ ಇರುವ ಅಂಶಗಳು, ಪ್ರೊಟೀನ್ ಸಂಕೀರ್ಣತೆಗಳನ್ನು ಅಧ್ಯಯನ ಮಾಡಲು ತಜ್ಞರು ಮುಂದಾಗಿದ್ದಾರೆ.

ಕಣ್ಣಿನಲ್ಲಿ ಶುಷ್ಕತೆ ಉಂಟು ಮಾಡುವ ಹಾಗೂ ಕಣ್ಣೀರಿನ ಉತ್ಪಾದನೆ ತಡೆಯುವ ಸೊಗ್ರೇನ್ ಸಿಂಡ್ರೋಮ್‌ಗೆ ಒಂಟೆಯ ಕಣ್ಣೀರು ಪರಿಹಾರ ಆಗಬಹುದು ಎಂದು ಹೇಳಲಾಗುತ್ತಿದೆ. ವೈದ್ಯ ಲೋಕದಲ್ಲಿ ಈ ಕುರಿತ ಸಂಶೋಧನೆಗಳು ಇನ್ನಷ್ಟೇ ಆಗಬೇಕಿದೆ. ಸದ್ಯದ ಮಟ್ಟಿಗೆ ಕಣ್ಣಿನಲ್ಲಿ ಶುಷ್ಕತೆ ಉಂಟಾಗುವ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಕಣ್ಣಿನ ಡ್ರಾಪ್ ಮೂಲಕ ಕೃತಕ ಕಣ್ಣೀರನ್ನು ನೀಡಲಾಗುತ್ತದೆ. ಆದರೆ ಅದು ತುಂಬಾನೇ ಪರಿಣಾಮಕಾರಿ ಅಲ್ಲ ಅನ್ನೋದು ತಜ್ಞರ ವಾದ.ಇನ್ನು ಒಂಟೆಗಳ ಕಣ್ಣಿನ ವಿಚಾರವಾಗಿ ಹೇಳೋದಾದ್ರೆ ಒಂಟೆಗಳಿಗೆ ಕಣ್ಣಿನ ಸಮಸ್ಯೆ ಬಾಧಿಸೋದು ಅತಿ ಕಡಿಮೆ. ಅತ್ಯಂತ ಒಣ ಹಾಗೂ ಧೂಳಿನಿಂದ ಕೂಡಿದ ಸನ್ನಿವೇಶದಲ್ಲೂ ಬದುಕಬಲ್ಲ ಸಾಮರ್ಥ್ಯ ಒಂಟೆಗಳಿಗೆ ಇದೆ.

[pj-news-ticker]