ಹೊಳೆಹೊನ್ನೂರು : ನಕಲಿ ಬಂಗಾರ ನೀಡಿ ವಂಚಿಸಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸುವಲ್ಲಿ ಪಿ.ಐ. ಲಕ್ಷ್ಮೀಪತಿ ನೇತೃತ್ವದ ತಂಡ ಯಶಸ್ವಿಯಾಗಿದೆ.
ಚನ್ನಗಿರಿ ತಾಲ್ಲೂಕಿನ ಚಿಕ್ಕಬ್ಬಿಕೆರೆ ಗ್ರಾಮದ ಸುನೀಲ್ (34) ಹಾಗೂ ನಾಗಪ್ಪ (50) ಬಂಧಿತ ಆರೋಪಿಗಳು. ಇವರಿಂದ ₹ 7 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಹಾಸನದ ಗಿರೀಗೌಡ ಅವರಿಗೆ ಅಸಲಿ ಬಂಗಾರ ತಂದುಕೊಡುವುದಾಗಿ ಹೇಳಿ ನಕಲಿ ಬಂಗಾರ ಮಾರಾಟ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.
ಕಾರ್ಯಚರಣೆಯಲ್ಲಿ ಪಿಎಸ್ಐಗಳಾದ ರಮೇಶ, ಮಂಜುನಾಥ ಎಸ್.ಕುರಿ, ಕೃಷ್ಣನಾಯ್ಕ ಹಾಗೂ ಸಿಬ್ಬಂದಿಯಾದ ಅಣ್ಣಪ್ಪ, ಪ್ರಕಾಶ ನಾಯ್ಕ, ಕುಬೇರನಾಯ್ಕ, ಪ್ರಶಾಂತ ಕುಮಾರ, ವಿಶ್ವನಾಥ ಪಾಲ್ಗೊಂಡಿದ್ದರು.
