Breaking
Sat. Apr 20th, 2024

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ; ಅಪಾಯದಿಂದ ಪಾರು

By Mooka Nayaka News Mar 18, 2024
Spread the love

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ ಸತ್ಯವತಿ ರಾಥೋಡ್(ಮಂಗ್ಲಿ) ಅವರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಂಶಾಬಾದ್‌ನ ತೊಂಡುಪಲ್ಲಿ ಸೇತುವೆ ಬಳಿ ಭಾನುವಾರ (ಮಾ. 17 ರಂದು) ರಾತ್ರಿ ನಡೆದಿರುವುದು ವರದಿಯಾಗಿದೆ.

ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.  ಮಂಗ್ಲಿ ಅವರ ಕಾರಿಗೆ ಟ್ರಕ್(ಡಿಸಿಎಂ ವಾಹನ)‌ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

ಗಾಯಕಿ ಮಂಗ್ಲಿ ಮತ್ತು ಇತರ ಇಬ್ಬರು ಪ್ರಯಾಣಿಕರಾದ ಮೇಘರಾಜ್ ಮತ್ತು ಮನೋಹರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ಆಗಿದೆ.ಮಂಗ್ಲಿ ಅವರ ಕಾರಿಗೆ ವಾಹನ ಹಿಂದಿನಿಂದ ಗುದ್ದಿದೆ. ಟ್ರಕ್ ಚಾಲಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ.‌  ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿದ್ದಾರೆ.

Related Post