ಶಿವಮೊಗ್ಗ: ಕೆ.ಎಸ್.ಈಶ್ವರಪ್ಪ ನಮ್ಮ ಪಕ್ಷವನ್ನು ಕಟ್ಟಿದವರು ಬೆಳೆಸಿದವರು. ಅವರ ಮನಸ್ಸಿಗೆ ನೋವಾಗಿರಬಹುದು. ರಾಜ್ಯ ನಾಯಕರು ಅವರ ಜೊತೆ ಮಾತನಾಡುವ ಪ್ರಯತ್ನ ನಡೆಸಿದ್ದಾರೆ. ಮೋದಿ ಅವರು ಬಂದಾಗ ಎಲ್ಲವೂ ಸರಿಯಾಗಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಬರುತ್ತಾರೆ. ಕಾರ್ಯಕ್ರಮದಲ್ಲಿ ಬಂದು ಮಾತನಾಡುವ ವಿಶ್ವಾಸ ಇದೆ. ಅವರನ್ನು ಮತ್ತೆ ಕರೆ ತರುವ ಪ್ರಯತ್ನ ನಮ್ಮ ಪಕ್ಷದ ಹಿರಿಯರು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸಿಟ್ಟಲ್ಲಿ ಹಾಗೇ ಮಾತನಾಡಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುತ್ತಾರೆ. ಅವರು ಕೂಡ ಪಕ್ಷ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲಾ ಸರಿ ಹೋಗುತ್ತದೆ ಎನ್ನುವ ವಿಶ್ವಾಸವಿದೆ. ಅವರ ಮಗನಿಗೆ ಟಿಕೆಟ್ ತಪ್ಪಲು ನಾನು ಕಾರಣವಲ್ಲ. ಅದು ಚುನಾವಣೆ ಸಮಿತಿ ನಿರ್ಧಾರ ಮಾಡಿರುವುದು. ಎಲ್ಲವೂ ಸರಿ ಹೋಗುತ್ತದೆ ಎಂದುಕೊಂಡಿದ್ದೇನೆ ಎಂದರು.
ಅವರ ಮನಸ್ಸಿಗೆ ಆದ ನೋವಿನಿಂದ ಈ ರೀತಿ ಹೇಳಿದ್ದಾರೆ. ಅವರ ಮಗನಿಗೆ ಟಿಕೆಟ್ ತಪ್ಪಲು ನಾವು ಕಾರಣರಲ್ಲ. ಕೇಂದ್ರದ ಚುನಾವಣಾ ಸಮಿತಿಯ ತೀರ್ಮಾನದಂತೆ ಟಿಕೆಟ್ ಹಂಚಿಕೆಯಾಗಿದೆ. ಇದರಲ್ಲಿ ನಮ್ಮ ಪಾತ್ರ ಇಲ್ಲ. ಈಶ್ವರಪ್ಪನವರು ನಮ್ಮ ಬಗ್ಗೆ ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದರು.
ಕಲಬುರಗಿಯಲ್ಲಿ ಮೋದಿ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ. 28 ಕ್ಕೆ 28 ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಕೂತಲ್ಲೂ ನಿಂತಲ್ಲೂ ಒಳ್ಳೆಯ ಅಭಿಪ್ರಾಯ ಬರುತ್ತಿದೆ ಎಂದು ಬಿಎಸ್ ವೈ ಹೇಳಿದರು.