Trending

ಸಕ್ರೆಬೈಲು ಬಿಡಾರದ ಎರಡು ಆನೆ ಮರಿಗಳಿಗೆ ನಾಮಕರಣ

Spread the love

ಶಿವಮೊಗ್ಗ: ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಮಂಗಳವಾರ ಸಕ್ರೆಬೈಲು ಆನೆಬಿಡಾರದ ಎರಡು ಆನೆ ಮರಿಗಳಿಗೆ ನಾಮಕರಣ ಮಾಡಲಾಯಿತು.

ನೇತ್ರಾವತಿ ಆನೆಯ ಮರಿಗೆ ಚಾಮುಂಡಿ ಹಾಗೂ ಭಾನುಮತಿಯ ಮರಿಗೆ ತುಂಗಾ ಎಂದು ನಾಮಕರಣ ಮಾಡಲಾಯಿತು.

ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಶಿಬಿರದಲ್ಲಿ ಹಬ್ಬದ ವಾತಾವರಣ ಮೂಡಿತ್ತು.

ಎಲ್ಲ ಆನೆಗಳನ್ನು ಬಣ್ಣದ ಚಿತ್ತಾರದೊಂದಿಗೆ ಅಲಂಕರಿಸಲಾಗಿತ್ತು. ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಫಲ-ತರಕಾರಿಗಳನ್ನು ತಿನ್ನಿಸಿ ಸಂಭ್ರಮಿಸಲಾಯಿತು.

ಆನೆ ಪ್ರಿಯ ಸಾರ್ವಜನಿಕರು, ಮಕ್ಕಳು ಆನೆಗಳ ಲೋಕದಲ್ಲಿ ವಿಹರಿಸುತ್ತಿದ್ದ ದೃಶ್ಯ ಕಂಡು ಬಂದಿತು.

[pj-news-ticker]