Trending

ಸಾಗರ : ಮೀನು ಹಿಡಿಯಲು ಹೋದವ ನೀರು ಪಾಲು

Spread the love

ಸಾಗರ: ತಾಲೂಕಿನ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ತಾಲೂಕಿನ ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ಯುವಕನಾಗಿದ್ದಾನೆ. ಜಡ್ಡಿನಬೈಲು ಶರಾವತಿ ಹಿನ್ನೀರಿನಲ್ಲಿ ಮೀನುಗಾರ ರವಿ ಎಂಬುವವರು ಸೋಮವಾರ ಸಂಜೆ ಮೀನಿಗಾಗಿ ಬಲೆ ಹಾಕಿ ಬಂದಿದ್ದರು. ಮಂಗಳವಾರ ಬೆಳಿಗ್ಗೆ ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ವಿಪರೀತ ಮಳೆಯಿಂದಾಗಿ ಶರಾವತಿ ಹಿನ್ನೀರಿನಲ್ಲಿ ರಭಸ ಹೆಚ್ಚಿದ್ದು, ಜೊತೆಗೆ ಮರಮಟ್ಟಿಗಳಲ್ಲಿ ನೀರು ಏರಿದೆ. ಮರಮಟ್ಟಿಗಳಿಗೆ ಬಲೆ ಸಿಕ್ಕಿದ್ದನ್ನು ರವಿ ಬಿಡಿಸಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]