Trending

ಮಹಾಕುಂಭಕ್ಕೆ ತೆರಳುತ್ತಿದ್ದ ಕಾರು ಅಪಘಾತವಾಗಿ 8 ಗೆಳೆಯರ ಸಾವು : ಸಾಮೂಹಿಕ ಅಂತ್ಯ ಸಂಸ್ಕಾರ, ಮುಗಿಲು ಮುಟ್ಟಿದ ಆಕ್ರಂದನ!

Spread the love

ಜೈಪುರ: ಮಹಾ ಕುಂಭ ಮೇಳದ ಪುಣ್ಯ ಸ್ನಾನದಲ್ಲಿ ಭಾಗಿಯಾಗಬೇಕು ಎಂದು ತೆರಳುತ್ತಿದ್ದ ಯಾತ್ರಿಗಳಿದ್ದ ವಾಹನ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, 8 ಜನರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಬಿಲ್ವಾರ ಜಿಲ್ಲೆಯ ಮಂಡಲಗಢ ಮೂಲದ 8 ಮಂದಿ ಸ್ನೇಹಿತರು ಮಹಾಕುಂಭ ಮೇಳಕ್ಕೆ ಭಾಗಿಯಾಗಲು ಹೊರಟಾಗ ಈ ದುರ್ಘಟನೆ ಸಂಭವಿಸಿದ್ದು, ತಕ್ಷಣಕ್ಕೆ ಸ್ಥಳೀಯರು ನೆರವಿಗೆ ಆಗಮಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವನ್ನಪ್ಪಿದವರ ಮೃತದೇಹಗಳನ್ನು ಶುಕ್ರವಾರ ಸ್ವಗ್ರಾಮಕ್ಕೆ ತಂದು ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು. ಊರಿನ ಯುವಕರ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಗುರುವಾರ ದುದು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ದುದು ಎಡಿಎಂ ಗೋಪಾಲ್​ ಪರಿಹಾರ್​ ಮತ್ತು ನೈಬ್​ ತಹಸೀಲ್ದಾರ್​​​ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಘಟನೆಯಲ್ಲಿ ಕಾರ್​ಗೆ ಡಿಕ್ಕಿ ಹೊಡೆದ ಬಸ್​ ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ದುದು ಎಡಿಎಂ ಮೃತಪಟ್ಟವರಲ್ಲಿ 7 ಮಂದಿಯ ಗುರುತುಪತ್ತೆಯಾಗಿದೆ. ಇವರೆಲ್ಲಾ ಪ್ರಯಾಗರಾಜ್​ ಮಹಾಕುಂಭಕ್ಕೆ ತೆರಳುತ್ತಿದ್ದರು. ಇವರ ಕಾರಿಗೆ ಎದುರಾಗಿ ಬಸ್​ ಬರುತ್ತಿತ್ತು. ಬಸ್​ ಟೈರ್​ ಸ್ಪೋಟಗೊಂಡ ಪರಿಣಾಮ ಅದು ನಿಯಂತ್ರಣ ತಪ್ಪಿದ್ದರಿಂದ ಮತ್ತೊಂದು ಮಾರ್ಗಕ್ಕೆ ಬಂದಿದ್ದು. ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

[pj-news-ticker]