Trending

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನಿಗೆ ಅರ್ಪಿಸಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ ‘ರಾಮಚರಿತಮಾನಸ’ ನಾಪತ್ತೆ?

Spread the love

ಉತ್ತರ ಪ್ರದೇಶ: ರಾಮಮಂದಿರಕ್ಕೆ ಹರಿದುಬಂದಿರುವ ದೇಣಿಗೆ ದುರುಪಯೋಗದ ಆರೋಪಗಳು ಈಗಾಗಲೇ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ತಪ್ಪಿತಸ್ಥರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.

ಇದರ ನಡುವೆಯೇ, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಯೊಬ್ಬರು ಶ್ರೀರಾಮನಿಗೆ ಕಾಣಿಕೆಯಾಗಿ ನೀಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಲೇಪಿತ ಪುಸ್ತಕವೇ ನಾಪತ್ತೆಯಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಏನಿದು ಗಂಭೀರ ಆರೋಪ?

ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ ಅವರ ಕುಟುಂಬವು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದ ಅತ್ಯಂತ ಅಮೂಲ್ಯವಾದ ಚಿನ್ನದ ಲೇಪಿತ ʻರಾಮಚರಿತಮಾನಸʼ ಪುಸ್ತಕ ಈಗ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ ಎಂದು ಆರೋಪಿಸಲಾಗಿದೆ.

ಪದೇ ಪದೇ ಮನವಿ ಮಾಡಿದರೂ ಟ್ರಸ್ಟ್ ಈ ಕಾಣಿಕೆಗೆ ರಶೀದಿಯನ್ನೇ ನೀಡಿಲ್ಲ ಎನ್ನಲಾಗಿದೆ.

147 ಕೆಜಿ ತೂಕದ ಚಿನ್ನದ ಪುಸ್ತಕದ ಹಿನ್ನೆಲೆ:

ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿರುವ ಎಸ್‌. ಲಕ್ಷ್ಮಿನಾರಾಯಣ್‌ ಅವರು ಹಲವು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ:

ಭೇಟಿ ಮತ್ತು ಕಾಣಿಕೆ: 2024ರ ಏಪ್ರಿಲ್ ತಿಂಗಳಲ್ಲಿ ಲಕ್ಷ್ಮಿನಾರಾಯಣ್ ಅವರು ತಮ್ಮ ಪತ್ನಿ ಸರಸ್ವತಿ ಅವರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿದ್ದಾಗ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಈ ಅಪರೂಪದ ಪುಸ್ತಕವನ್ನು ಹಸ್ತಾಂತರಿಸಿದ್ದರು.

ಪುಸ್ತಕದ ವಿಶೇಷತೆ: ಈ ವಿಶೇಷ ‘ರಾಮಚರಿತಮಾನಸ’ ಪುಸ್ತಕವು ಬರೋಬ್ಬರಿ 147 ಕೆಜಿ ತೂಕ ಹೊಂದಿದ್ದು, ಇದರ ಎಲ್ಲಾ 522 ಪುಟಗಳಿಗೂ ಚಿನ್ನದ ಲೇಪನ ಮಾಡಲಾಗಿತ್ತು. ಇದರ ಅಂದಾಜು ಮೌಲ್ಯ ಸುಮಾರು 4 ರಿಂದ 5 ಕೋಟಿ ರೂಪಾಯಿ ಎನ್ನಲಾಗಿದೆ.

ಭಾವನಾತ್ಮಕ ಸಂಬಂಧ: ಲಕ್ಷ್ಮಿನಾರಾಯಣ್ ಅವರ ದಿವಂಗತ ತಾಯಿಯ ನೆನಪಿಗಾಗಿ ಈ ಕಾಣಿಕೆಯನ್ನು ನೀಡಲಾಗಿತ್ತು. ಅವರ ತಾಯಿ ತಮ್ಮ ಜೀವಿತಾವಧಿಯ 15 ರಿಂದ 18 ವರ್ಷಗಳನ್ನು ಕೇವಲ ರಾಮನಾಮ ಬರೆಯುವುದರಲ್ಲೇ ಕಳೆದಿದ್ದರು. ಅಷ್ಟೇ ಅಲ್ಲದೆ, ಅವರ ಕುಟುಂಬವು ಹಲವು ದಶಕಗಳಿಂದ ರಾಮಜನ್ಮಭೂಮಿ ಚಳವಳಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು.

 

[pj-news-ticker]