Trending

ತೀರ್ಥಹಳ್ಳಿ : ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೆಬ್ರಿ ಮೂಲದ ವೃದ್ಧನ ರಕ್ಷಣೆ

Spread the love

ತೀರ್ಥಹಳ್ಳಿ : ವೃದ್ಧರೊಬ್ಬರು ತೀರ್ಥಹಳ್ಳಿಯ ತುಂಗಾ ನದಿ ಸಮೀಪ ತಮ್ಮ ಮೈಮೇಲೆ ಇದ್ದ ಚಿನ್ನದ ಉಂಗುರ, ಕನ್ನಡಕ, ಕೆಲವು ಚೀಟಿಗಳನ್ನು ನದಿಗೆ ಎಸೆದು ಆತ್ಮಹತ್ಯೆಗೆ ಮುಂದಾಗಿದ್ದ ವೇಳೆ ಸ್ಥಳೀಯರು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.

ಹೆಬ್ರಿ ಮೂಲದ ಕಾಳ್ ಶೆಟ್ಟಿ ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆಗೆ ಮುಂದಾಗಿದ್ದರು. ಗಮನಿಸಿದ ಸ್ಥಳೀಯ ಯುವಕರಾದ ಪ್ರಮೋದ್ ಪೂಜಾರಿ ಮತ್ತು ತಂಡ ಅವರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್ಪಿ ಗಜಾನನ ವಾಮನ ಸುತಾರ ರವರು ವೃದ್ಧರಾದ ಕಾಳ್ ಶೆಟ್ಟಿ ಅವರನ್ನು ಜೆಸಿ ಆಸ್ಪತ್ರೆಗೆ ದಾಖಲಿಸಿ ಹೆಬ್ರಿಯ ಅವರ ವಿಳಾಸ ತಿಳಿದು ವೃದ್ಧರನ್ನು ಕರೆದುಕೊಂಡು ಹೋಗಲುಸಂಬಂಧಿಕರಿಗೆ ತಿಳಿಸಿದ್ದಾರೆ.

ತೀರ್ಥಹಳ್ಳಿ ಪೊಲೀಸರ ದೂರವಾಣಿ ಸಂಖ್ಯೆ 0881-228333 ಸಂಪರ್ಕಿಸಲು ಕೋರಲಾಗಿದೆ.

[pj-news-ticker]