ಶಿವಮೊಗ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ A 6 ಆರೋಪಿಯಾಗಿರುವ ಜಗದೀಶ್ ಕೊನೆಗೂ ಶಿವಮೊಗ್ಗ ಜೈಲಿನಿಂದ ಇಂದು ಬಿಡುಗಡೆಗೊಂಡಿದ್ದಾನೆ.
ಮಂಗಳವಾರವಷ್ಟೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹನ್ನೆರಡನೇ ಆರೋಪಿಯಾಗಿದ್ದ ಲಕ್ಷ್ಮಣ್ ಬಿಡುಗಡೆಗೊಂಡಿದ್ದ ಇದಾದ ಬಳಿಕ ನಾಲ್ಕನೇ ಆರೋಪಿಯಾಗಿದ್ದ ಜಗದೀಶ್ ಗೆ ಜಾಮೀನು ಸಿಕ್ಕರೂ ಶ್ಯೂರಿಟಿ ಕೊಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಬಿಡುಗಡೆ ತಡವಾಗಿತ್ತು ಆದರೆ ಇಂದು ಕಾಲ ಕೂಡಿ ಬಂದಿದ್ದು ಅದರಂತೆ ಜೈಲು ಅಧಿಕಾರಿಗಳು ಕಾನೂನು ಪ್ರಕ್ರಿಯೆ ಮುಗಿಸಿ ಬಿಡುಗಡೆಗೊಳಿಸಿದ್ದಾರೆ.
ಜಗದೀಶ್ ನನ್ನು ಕರೆದುಕೊಂಡು ಹೋಗಲು ಆತನ ಕುಟುಂಬಸ್ಥರು ಶಿವಮೊಗ್ಗಕ್ಕೆ ಬಂದಿದ್ದು ಅವರೊಂದಿಗೆ ಊರಿಗೆ ಪ್ರಯಾಣ ಬೆಳೆಸಿದ್ದಾನೆ.
