ಬೆಂಗಳೂರು: ಅಂಬಿ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ತಂದೆ- ತಾಯಿಯಾದ ಸಂತಸದಲ್ಲಿದ್ದಾರೆ. ಮುದ್ದಾದ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದಾರೆ.
ಇಂದು ಮುಂಜಾನೆ ಬೆಳಗ್ಗೆ 8:30ರ ಹೊತ್ತಿಗೆ ಅವಿವಾ ಮಗುವಿಗೆ ಜನ್ಮ ನೀಡಿದ್ದಾರೆ. ಮೊಮ್ಮಗನನ್ನು ಎತ್ತಿಕೊಂಡು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮುದ್ದಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2023ರಲ್ಲಿ ಅಭಿಷೇಕ್ – ಅವಿವಾ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಆ ಬಳಿಕ ರಿಸೆಪ್ಷನ್ ಕಾರ್ಯಕ್ರಮ ನಂತರ ಮಂಡ್ಯದಲ್ಲಿ ಬೀಗರ ಊಟವನ್ನು ಆಯೋಜಿಸಿದ್ದರು. ಇದೀಗ ಅಂಬಿ ಕುಟುಂಬ ತಮ್ಮ ಮನೆಗೆ ಮುದ್ದಾದ ಪುಟ್ಟ ಸದಸ್ಯನನ್ನು ಬರ ಮಾಡಿಕೊಂಡಿದೆ.
