Trending

ಶಿವಮೊಗ್ಗದಲ್ಲಿ ನ.6 ರಿಂದ ಹಾಪ್ ಕಾಮ್ಸ್‌ನ ನೂತನ ಹಣ್ಣು ಮತ್ತು ಜ್ಯೂಸ್ ಮಳಿಗೆ ಆರಂಭ

Spread the love

ಶಿವಮೊಗ್ಗ: ಗ್ರಾಹಕರಿಗೆ ಒಂದೇ ಸೂರಿನಡಿ ವಿವಿಧ ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳನ್ನು ಒದಗಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆ ಆರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್. ವಿಜಯಕುಮಾರ್ ತಿಳಿಸಿದರು.

ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹಾಪ್ ಕಾಮ್ಸ್ ಪ್ರಧಾನ ಕಚೇರಿಯ ಕೆಳಭಾಗದಲ್ಲಿ ನ.6ರಂದು ಬೆಳಿಗ್ಗೆ 11 ಗಂಟೆಗೆ ಮಳಿಗೆ ಉದ್ಘಾಟನೆಯಾಗಲಿದೆ.

ಮಳಿಗೆಯಲ್ಲಿ ಲಿಚ್ಚಿ, ರಾಂಬುಟಾನ್, ಡ್ರ್ಯಾಗನ್ ಫ್ರೂಟ್, ಕಿವಿ, ಬ್ಲೂಬೆರ್ರಿ, ಸ್ಟ್ರಾಬೆರಿ, ಚೆರ್ರಿ ಸೇರಿದಂತೆ ವಿವಿಧ ದೇಶಿ ಮತ್ತು ವಿದೇಶಿ ಹಣ್ಣುಗಳು ಹಾಗೂ ತಾಜಾ ಹಣ್ಣಿನ ಜ್ಯೂಸ್ ಲಭ್ಯವಿರಲಿದೆ ಎಂದರು.

ಇದೇ ವೇಳೆ ಹಾಪ್ ಕಾಮ್ಸ್‌ನ ‘ರೈತ ಮಿತ್ರ’ ಮತ್ತು ‘ರೈತ ಸ್ನೇಹಿ’ ಸಾವಯವ ಗೊಬ್ಬರಗಳಿಗೆ ರೈತರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಕಳೆದ ಆರು–ಏಳು ತಿಂಗಳಲ್ಲಿ 50ರಿಂದ 60 ಸಾವಿರ ಚೀಲಗಳು ಮಾರಾಟವಾಗಿವೆ. 40 ಕೆ.ಜಿ. ಚೀಲಕ್ಕೆ ₹370 ದರ ನಿಗದಿಪಡಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ರೈತರಿಗೆ ಸಾಗಣೆ ವೆಚ್ಚವಿಲ್ಲದೆ ಗೊಬ್ಬರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ನಾಗರಾಜ್ ಗೌಡ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

[pj-news-ticker]