ಹೊಳೆಹೊನ್ನೂರು: ಸಮೀಪದ ಮಲ್ಲಾಪುರದಲ್ಲಿ ಅಡಿಕೆ ತುಂಬಿದ ವಾಹನಗಳ ಮೇಲೆ ದಾಳಿ ಮಾಡಿದ ತೆರಿಗೆ ಅಧಿಕಾರಿಗಳು ಅಡಿಕೆ ಚೀಲ ತುಂಬಿದ ಎರಡು ವಾಹನಗಳನ್ನು ವಶಕ್ಕೆ ಪಡೆದ ಜೂನ್. 12ರ ಶುಕ್ರವಾರ ನಡೆದಿದೆ.
ಶುಕ್ರವಾರ ಕೆ.ಕೆ. ರಸ್ತೆಯಲ್ಲಿ ಅಡಿಕೆ ಚೀಲ ತುಂಬಿದ 2 ಟಾಟಾ ಎಸ್ ವಾಹನಗಳನ್ನು ಬೆನ್ನಟ್ಟಿ ಬಂದ ಅಧಿಕಾರಿಗಳು ಮಲ್ಲಾಪುರದಲ್ಲಿ 2 ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಡಿಕೆ ಚೀಲ ತುಂಬಿದ ಲಾರಿಗಳು ಹೊಳಲ್ಕೆರೆಯ ಶಿವಪುರ ಹಾಗೂ ನಲ್ಲೂರು ಮೂಲದ ಅಡಿಕೆ ವರ್ತರಿಗೆ ಸೇರಿದ ಲಾರಿಗಳು ಎನ್ನಲಾಗುತ್ತಿದೆ.
ಸ್ಥಳೀಯವಾಗಿ ತೆರಿಗೆ ವಂಚಿಸಿ ಅಡಿಕೆಯನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿದ್ದಾರೆ.
ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಸ್ಥಳೀಯ ಅಡಿಕೆ ವರ್ತಕರು ತೆರಿಗೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಹಳ್ಳಿಗಳಿಗೆ ಬಂದು ದಾಳಿ ಮಾಡದಂತೆ ವಾಗ್ವಾದ ನಡೆಸಿದರು.
ಜನ ಜಮಾವಣೆಯಾಗಿದ್ದರಿಂದ ಮಲ್ಲಾಪುರದಲ್ಲಿ ಕೆಲ ಕಾಲ ಬೀಗುವಿನ ವಾತವರಣ ಸೃಷ್ಠಿಯಾಯಿತ್ತು. ತೆರಿಗೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ಮಾಡುತ್ತಾರೆಂದು ಗಾಳಿ ಸುದ್ದಿ ಹರಡಿದ ಕಾರಣ ಮಲ್ಲಾಪುರದಲ್ಲಿ ಮದ್ಯಾಹ್ನದಿಂದ ಸಂಜೆಯ ವರೆಗೂ ದಿನಸಿ ಸೇರಿದಂತೆ ಗೂಡಂಗಡಿಗಳಿಗೂ ಬೀಗಾ ಜಡಿಯಲಾಗಿತ್ತು.
