Trending

ರಿಪ್ಪನ್‌ಪೇಟೆಯಲ್ಲಿ ಮೊಟ್ಟೆ ಸಾಗಣೆ ವಾಹನ ಪಲ್ಟಿ; ರಸ್ತೆಯುದ್ದಕ್ಕೂ ಒಡೆದು ಬಿದ್ದ ಸಾವಿರಾರು ಮೊಟ್ಟೆಗಳು

Spread the love

ಹೊಸನಗರ : ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೋಳಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಸರಕು ವಾಹನ ಪಲ್ಟಿಯಾಗಿ, ಸಾವಿರಾರು ಮೊಟ್ಟೆಗಳು ರಸ್ತೆಯುದ್ದಕ್ಕೂ ಒಡೆದು ಬಿದ್ದಿವೆ.

ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಟ್ಟೆಗಳು ನಷ್ಟವಾಗಿವೆ.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಎದುರು ಈ ಅವಘಡ ಸಂಭವಿಸಿದೆ.

ವೇಗವಾಗಿ ಸಂಚರಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ ಮೊಟ್ಟೆಗಳ ಕ್ರೇಟ್‌ಗಳು ಚಿಂದಿಯಾಗಿದ್ದು, ರಸ್ತೆಯ ತುಂಬೆಲ್ಲಾ ಮೊಟ್ಟೆಗಳು ಒಡೆದು ದ್ರವ ಹರಿದಿದೆ.

ಅಪಘಾತ ನಡೆದ ಸಮಯದಲ್ಲಿ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರ ಕಡಿಮೆಯಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಾಹನ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ವಾಹನವು ಕುಂದಾಪುರ ಮೂಲದ ರಹಮತ್ತುಲ್ಲಾ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ವಾಹನದ ಮಾಲೀಕರು ಸ್ಥಳಕ್ಕೆ ಆಗಮಿಸಿ, ಕ್ರೇನ್ ಸಹಾಯದಿಂದ ಪಲ್ಟಿಯಾಗಿದ್ದ ವಾಹನವನ್ನು ತೆರವುಗೊಳಿಸಿದರು.

[pj-news-ticker]