Trending

ಟಿ20 ವಿಶ್ವಕಪ್ ನಿಂದ ಆಸ್ಟ್ರೇಲಿಯಾ ಔಟ್, ಸೂಪರ್ 8ರ ಹಂತಕ್ಕೆ ತಲುಪಿದ ಜಿಂಬಾಬ್ವೆ

Spread the love

ಪಲ್ಲೆಕೆಲೆ: ಜಿಂಬಾಬ್ವೆ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್  8 ಹಂತಕ್ಕೆ ಲಗ್ಗೆ ಹಾಕಿದೆ. ಇದೇ ವೇಳೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯ ಕೂಟದಿಂದ ಹೊರಬಿದ್ದಿದೆ!

ಇದಕ್ಕೆಲ್ಲ ಕಾರಣವಾದದ್ದು ಮಂಗಳವಾರ ಪಲ್ಲೆಕೆಲೆಯಲ್ಲಿ ಸುರಿದ ಭಾರೀ ಮಳೆ. ಇದರಿಂದ ಜಿಂಬಾಬ್ವೆ ಐರ್ಲೆಂಡ್ ನಡುವಿನ ‘ಬಿ’ ವಿಭಾಗದ ಪಂದ್ಯ ಟಾಸ್ ಕೂಡ ಕಾಣದೆ ರದ್ದುಗೊಂಡಿತು. ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಯಿತು.

ಜಿಂಬಾಬ್ವೆಯ ಅಂಕ 5ಕ್ಕೆ ಏರಿತು. ಗುಂಪಿನಲ್ಲಿ ದ್ವಿತೀಯ ಸ್ಥಾನವನ್ನು ಗಟ್ಟಿಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. 3 ಅಂಕ ಹೊಂದಿರುವ ಐರ್ಲೆಂಡ್ ಮತ್ತು 2 ಅಂಕ ಗಳಿಸಿರುವ ಆಸ್ಟ್ರೇಲಿಯ ತಂಡಗಳೆರಡೂ ಪಂದ್ಯಾವಳಿಯಿಂದ ನಿರ್ಗಮಿಸಿದವು.

ಆಸ್ಟ್ರೇಲಿಯ ತನ್ನ ಕೊನೆಯ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ (ಫೆ. 20). ಇದನ್ನು ಗೆದ್ದರೂ ಆಸೀಸ್ ಅಂಕ 4ಕ್ಕೆ ಸೀಮಿತಗೊಳ್ಳುತ್ತದೆ. ಐರ್ಲೆಂಡ್ ಈಗಾಗಲೇ ಲೀಗ್ ಸ್ಪರ್ಧೆ ಮುಗಿಸಿದೆ.

ಜಿಂಬಾಬ್ವೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಫೆ. 19ರಂದು ಶ್ರೀಲಂಕಾ ವಿರುದ್ಧ ಆಡಲಿದೆ.

 ‘ಗ್ರೂಪ್‌ 1’’ ವಿಭಾಗದಲ್ಲಿ ಜಿಂಬಾಬ್ವೆ:

2024ರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಸಂಪಾದಿಸಲು ವಿಫಲವಾಗಿದ್ದ ಜಿಂಬಾಬ್ವೆ, ಈ ಬಾರಿ ಆಸ್ಟ್ರೇಲಿಯವನ್ನು ಬಗ್ಗುಬಡಿಯುವ ಮೂಲಕ ಸುದ್ದಿಯಾಗಿತ್ತು.

[pj-news-ticker]