Trending

ನಾಲ್ಕನೇ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಜೆಂಟೀನಾ

Spread the love

ನ್ಯೂಯಾರ್ಕ್: ನ್ಯೂಜೆರ್ಸಿಯ ಕ್ರೀಡಾಂಗಣದಲ್ಲಿ ಜುಲೈ 19ರಂದು ನಡೆದಿದ್ದ 2026ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-1 ಅಂತರದ ಸೋಲು ಅನುಭವಿಸಿದ ಅರ್ಜೆಂಟೀನಾ ತಂಡದ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು.

ಪಂದ್ಯದ ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಅರ್ಜೆಂಟೀನಾದ ವಿಶ್ವಕಪ್ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಕೊನೆಯಾಯಿತು.

ಈ ಸೋಲಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಬಾರಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಹಿಂದೆ 1930, 1990 ಮತ್ತು 2014ರ ವಿಶ್ವಕಪ್‌ಗಳ ಫೈನಲ್‌ ಪಂದ್ಯಗಳಲ್ಲಿಯೂ ಅರ್ಜೆಂಟೀನಾ ಸೋಲು ಕಂಡಿತ್ತು.

ಇದೀಗ ಅರ್ಜೆಂಟೀನಾ ಮತ್ತು ಜರ್ಮನಿ ವಿಶ್ವಕಪ್ ಫೈನಲ್‌ನಲ್ಲಿ ತಲಾ ನಾಲ್ಕು ಬಾರಿ ಸೋತಿರುವ ತಂಡಗಳ ಪಟ್ಟಿಯಲ್ಲಿ ಸೇರಿವೆ. ಜರ್ಮನಿ 1966, 1982, 1986 ಮತ್ತು 2002ರ ವಿಶ್ವಕಪ್‌ ಟೂರ್ನಿಗಳಲ್ಲಿ ರನ್ನರ್-ಅಪ್ ಆಗಿತ್ತು.

ಅತಿ ಹೆಚ್ಚು ಬಾರಿ ಫಿಫಾ ವಿಶ್ವಕಪ್‌ ಫೈನಲ್‌ ಸೋತ ತಂಡಗಳು

ಜರ್ಮನಿ: 4 (1966, 1982, 1986, 2002)

ಅರ್ಜೆಂಟೀನಾ: 4 (1930, 1990, 2014, 2026)

ನೆದರ್ಲೆಂಡ್ಸ್: 3 (1974, 1978, 2010)

ಭಾನುವಾರ ಸ್ಪೇನ್ ವಿರುದ್ಧ ಗೆದ್ದಿದ್ದರೆ ಅರ್ಜೆಂಟೀನಾ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಉಳಿಸಿಕೊಂಡ ಮೂರನೇ ತಂಡ ಎಂಬ ಐತಿಹಾಸಿಕ ಸಾಧನೆ ಮಾಡುತ್ತಿತ್ತು. ಈ ಸಾಧನೆಯನ್ನು ಇದುವರೆಗೆ ಕೇವಲ ಎರಡು ತಂಡಗಳು ಮಾತ್ರ ಮಾಡಿವೆ.

ಇಟಲಿ 1934 ಮತ್ತು 1938ರಲ್ಲಿ ಸತತವಾಗಿ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದ್ದರೆ, ಬ್ರೆಜಿಲ್ 1958 ಮತ್ತು 1962ರಲ್ಲಿ ಪ್ರಶಸ್ತಿ ಉಳಿಸಿಕೊಂಡು ಎರಡನೇ ತಂಡವಾಗಿ ದಾಖಲೆ ಬರೆದಿತ್ತು.

[pj-news-ticker]