Breaking
Sat. Apr 20th, 2024

ಕಿರಾತಕ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ

By Mooka Nayaka News Mar 30, 2024
Spread the love

ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ರಾತ್ರಿ ಹೃದಯಾಘಾತದಲ್ಲಿ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಾಜಿ ಅವರನ್ನು ಚೆನ್ನೈನ ಕೊಟ್ಟಿವಕಮ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ವರ್ಷದ ಡ್ಯಾನಿಯಲ್ ಬಾಲಾಜಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಡ್ಯಾನಿಯಲ್ ಬಾಲಾಜಿ ಅವರ ನಿಧನವು ತಮಿಳು ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಶಾಕ್ ನೀಡಿದೆ. ಹಲವು ನಟರು, ನಿರ್ದೇಶಕರು, ನಿರ್ಮಾಪಕರು ಸಂತಾಪ ಸೂಚಿಸಿದ್ದಾರೆ.

ಡ್ಯಾನಿಯಲ್ ಬಾಲಾಜಿ ಮೃತದೇಹವನ್ನು ಪುರಸಾವಲ್ಕಮ್ ನಲ್ಲಿನ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಶನಿವಾರ ಅಂತಿಮ ವಿಧಿವಿಧಾನಗಳು ನಡೆಯಲಿದೆ.

ಡ್ಯಾನಿಯಲ್ ಬಾಲಾಜಿ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದರು. ನಿರ್ದೇಶಕ ಗೌತಮ್ ಮೆನನ್ ಮತ್ತು ಕಮಲ್ ಹಾಸನ್ ಅವರ ‘ವೆಟ್ಟೈಯಾಡು ವಿಲೈಯಾಡು’ ಚಿತ್ರದಲ್ಲಿ ಅಮುಧನ್ ಪಾತ್ರದಲ್ಲಿ ಅವರ ಅಭಿನಯವು ಎಂದೂ ಮರೆಯಲಾಗದ್ದು.

ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಡ್ಯಾನಿಯಲ್ ಬಾಲಾಜಿ ನಟಿಸಿದ್ದರು.

Related Post