Trending

ಭದ್ರಾವತಿ : ಪರಸ್ತ್ರೀಯೊಂದಿಗೆ ಸಂಬಂಧ : ಆಕ್ಷೇಪಿಸಿದ ಪತ್ನಿಗೆ ಚಟ್ಟ ಕಟ್ಟಿದ ಪತಿ

Spread the love

ಭದ್ರಾವತಿ : ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಕತ್ತು ಹಿಸುಕಿ ಪತಿ ಕೊಲೆ ಮಾಡಿರುವಂತಹ ಘಟನೆ  ತಾಲೂಕಿನ ಪಂಡರಹಳ್ಳಿ ಕ್ಯಾಂಪ್​ನಲ್ಲಿ ನಡೆದಿದೆ.

ಜ.11ರಂದು ಮನೆಯಲ್ಲಿ ಉಸಿರುಗಟ್ಟಿಸಿ ಚಂದನಾಬಾಯಿ ಅನ್ನು ಪತಿ ಗೋಪಿ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಪೊಲೀಸರ ತನಿಖೆ ವೇಳೆ ಗೋಪಿ ಸಿಕ್ಕಿಬಿದಿದ್ದು, ಇದೀಗ ಆತನ ಬಂಧನವಾಗಿದೆ.

ನಡೆದದ್ದೇನು?

ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಮತ್ತು ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪರಸ್ಪರ ಬೇರೆ ಜಾತಿಯವರಾಗಿದ್ದು, ಇಬ್ಬರು ಪ್ರೀತಿಸಿ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಕೆಲವು ದಿನ ತಲೆಮರೆಸಿಕೊಂಡಿದ್ದರು. ಬಳಿಕ ವಾಪಸ್ ಊರಿಗೆ ಬಂದು ಸಂಸಾರ ನಡೆಸಿದ್ದರು. ಇವರ ಪ್ರೀತಿ ಸಂಕೇತಕ್ಕೆ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಈ ನಡುವೆ ಮತ್ತೊಂದು ಯುವತಿಯ ಜೊತೆ ಗೋಪಿಗೆ ಲವ್​ ಆಗಿದೆ. ಆ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದ. ಆದರೆ ಪತ್ನಿ ಚಂದನಾಬಾಯಿ ಈ ಎರಡನೇ ಮದುವೆಗೆ ವಿರೋಧಿಸಿದ್ದಾರೆ. ವಿರೋಧಿಸಿದ ಪತ್ನಿಯನ್ನು ತನ್ನ ಮನೆಯಲ್ಲೇ ಕುತ್ತಿಗೆ ಹಿಸುಕಿ ಗೋಪಿ ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡಿದಲ್ಲದೇ ಕೊಲೆಗೂ ತನಗೂ ಸಂಬಂಧವಿಲ್ಲದಂತೆ ಹೈಡ್ರಾಮಾ ಮಾಡಿದ್ದಾನೆ.

ಆದರೆ ಹೊಳೆಹೊನ್ನೂರು ಪೊಲೀಸರ ತನಿಖೆ ವೇಳೆ ಅಸಲಿ ಬಣ್ಣ ಬಯಲಾಗಿದೆ. ಇದೀಗ ಪೊಲೀಸರು ಗೋಪಿಯನ್ನು ಬಂಧಿಸಿದ್ದಾರೆ. ಗೋಪಿ ವಿಕೃತಿ ಪ್ರೀತಿಗೆ ಇಬ್ಬರು ಗಂಡು ಮಕ್ಕಳು ಅನಾಥವಾಗಿವೆ.

[pj-news-ticker]