Trending

ಭದ್ರಾವತಿ : ಅಂಬೇಡ್ಕರ್ – ಜಗಜೀವನರಾಮ್ ಜಯಂತಿ: ಪ್ರತ್ಯೇಕ ಆಚರಣೆಗೆ ವಿರೋಧದ ಧ್ವನಿ

Spread the love

ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್  ಹಾಗೂ ಡಾ. ಬಾಬು ಜಗಜೀವನರಾಮ್‌ ಅವರ ಜಯಂತಿಗಳನ್ನು ಈ ಬಾರಿ ಪ್ರತ್ಯೇಕವಾಗಿ ಆಚರಿಸುವ ನಿರ್ಧಾರ ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಪೂಜಿ ಹರಿಜನ (ಮಾದರ) ಸೇವಾ ಸಂಘದ ಅಧ್ಯಕ್ಷ ಬಿ.ಎ. ಮಂಜುನಾಥ್ ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಶಿವಬಸಪ್ಪ, ಇಬ್ಬರು ಮಹನೀಯರ ಹೋರಾಟದ ಮಾರ್ಗ ಬೇರೆಬೇರೆ ಆಗಿದ್ದರೂ, ಅವರ ಉದ್ದೇಶ ಮತ್ತು ದಲಿತಪರ ನಿಲುವು ಒಂದೇ ಆಗಿತ್ತು ಎಂದು ತಿಳಿಸಿದರು. ಹಲವು ವರ್ಷಗಳಿಂದ ನಗರದಲ್ಲಿ ಈ ಇಬ್ಬರ ಜಯಂತಿಗಳನ್ನು ಒಟ್ಟಿಗೆ ಆಚರಿಸುವ ಸಂಪ್ರದಾಯ ಬೆಳೆದಿದ್ದು, ಜನರಲ್ಲಿ ಸಹ ಅದೇ ಭಾವನೆ ರೂಪುಗೊಂಡಿತ್ತು ಎಂದು ಹೇಳಿದರು.

ಈ ಬಾರಿ ಏಕಾಏಕಿ ಪ್ರತ್ಯೇಕ ಆಚರಣೆ ನಡೆಸುತ್ತಿರುವುದು ದಲಿತ ಸಮುದಾಯದೊಳಗಿನ ಸಮನ್ವಯದ ಕೊರತೆಯನ್ನು ತೋರಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಮತ್ತೆ ಇಬ್ಬರ ಜಯಂತಿಗಳನ್ನು ಒಟ್ಟಿಗೆ ಆಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಆದಾಗ್ಯೂ, ಏಪ್ರಿಲ್ 5ರಂದು ನಡೆಯಲಿರುವ ಜಗಜೀವನ ರಾಮ್ ಜಯಂತಿ ಹಾಗೂ ಏಪ್ರಿಲ್ 14ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳಿಗೆ ಯಾವುದೇ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ  ಪ್ರಮುಖರಾದ ಡಿಎಸ್‌ಎಸ್ ಪ್ರಮುಖರಾದ ತಾಲೂಕು ಸಂಚಾಲಕ ನಾಗರಾಜ್, ನ್ಯಾಯವಾದಿ ಎಂ. ಶಿವಕುಮಾರ್, ಶ್ರೀನಿವಾಸ್, ಕರಿಯಪ್ಪ, ಬಾಪೂಜಿ ಹರಿಜನ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಉಪಾಧ್ಯಕ್ಷ ಬಸವರಾಜಪ್ಪ, ಮಾರುತಿ, ಶೋಭಾ, ಜಯಣ್ಣ, ಕೃಷ್ಣಪ್ಪ, ಮಂಜುನಾಥ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

[pj-news-ticker]