Trending

ಸಂಕ್ರಾಂತಿ ಹಬ್ಬ ಸಂಭ್ರಮ : ಅಳಿಯನಿಗೆ 158 ಬಗೆಯ ಖಾದ್ಯಗಳನ್ನು ಉಣ ಬಡಿಸಿದ ಆಂಧ್ರದ ಕುಟುಂಬ

Spread the love

ಆಂಧ್ರಪ್ರದೇಶ: ಸಂಕ್ರಾಂತಿ ಎಂದರೆ ಸಂಭ್ರಮದ ಹಬ್ಬ. ಅದರಲ್ಲೂ ಆಂಧ್ರಪ್ರದೇಶದಲ್ಲಿ ಅಳಿಯಂದಿರನ್ನು ಈ ಹಬ್ಬದಂದು ರಾಜರಂತೆ ಉಪಚರಿಸುವುದು ಇಲ್ಲಿನ ಸಂಪ್ರದಾಯ. ಅದರಂತೆ ಈ ಬಾರಿ ಗುಂಟೂರು ಜಿಲ್ಲೆಯ ತೆನಾಲಿಯ ವಂದನಪು ಮುರಳಿಕೃಷ್ಣ ಮತ್ತು ಅವರ ಪತ್ನಿ ತಮ್ಮ ಅಳಿಯ ಶ್ರೀದತ್ತನಿಗಾಗಿ ನೀಡಿದ ಔತಣಕೂಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆಂಧ್ರದ ತೆನಾಲಿಯ ಮುರಳೀಕೃಷ್ಣ ಅವರ ಮಗಳು ಮೌನಿಕಾ ಅವರನ್ನು ರಾಜಮಹೇಂದ್ರವರಂನ ಶ್ರೀದತ್ತ ಅವರೊಂದಿಗೆ ಕಳೆದ ವರ್ಷ ವಿವಾಹ ಮಾಡಿಕೊಡಲಾಗಿತ್ತು. ಹಾಗಾಗಿ ಅಳಿಯನಿಗೆ ಅತ್ತೆ ಮನೆಯಲ್ಲಿ ಮೊದಲ ಸಂಕ್ರಾಂತಿ ಹಬ್ಬ, ಈ ಹಿನ್ನೆಲೆಯಲ್ಲಿ ಅಳಿಯನಿಗೆ ಮರೆಯಲಾಗದ ಉಡುಗೊರೆ ನೀಡಲು ಬಯಸಿದ ಅತ್ತೆ-ಮಾವ, ಬರೋಬ್ಬರಿ 158 ಬಗೆಯ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿದ್ದರು.

ಔತಣ ಕೂಟದಲ್ಲಿ ಸಿಹಿ ಪದಾರ್ಥಗಳು, ಖಾರ, ವಿವಿಧ ಬಗೆಯ ಅನ್ನ (ಪುಲಿಹೋರ, ಬಿರಿಯಾನಿ), ತರಕಾರಿ ಪಲ್ಯಗಳು, ಉಪ್ಪಿನಕಾಯಿ, ಹಣ್ಣುಗಳು ಮತ್ತು ಪಾನೀಯಗಳು ಸೇರಿದಂತೆ ಒಟ್ಟು 158 ಬಗೆಯ ಖಾದ್ಯಗಳು ಇದ್ದವು. ಸಾಮಾನ್ಯವಾಗಿ ಆಂಧ್ರದ ಗೋದಾವರಿ ಜಿಲ್ಲೆಗಳಲ್ಲಿ ಅಳಿಯನಿಗೆ ಈ ರೀತಿ ನೂರಾರು ಖಾದ್ಯಗಳನ್ನು ಬಡಿಸುವ ಸಂಪ್ರದಾಯ ಮೊದಲಿನಿಂದಲೂ ರೂಡಿಯಲ್ಲಿದೆ ಅದೇ ಮಾದರಿಯನ್ನು ಈ ಬಾರಿ ಗುಂಟೂರು ಜಿಲ್ಲೆಯ ಈ ಕುಟುಂಬ ಅನುಸರಿಸಿದೆ.

ಅಂದ ಹಾಗೆ ಅತ್ತೆ ಮಾವ ನೀಡಿದ ಈ ಅದ್ದೂರಿ ಔತಣಕೂಟವನ್ನು ಕಂಡು ಅಳಿಯ ಶ್ರೀದತ್ತ ಆಶ್ಚರ್ಯಚಕಿತರಾಗಿದ್ದಾರೆ.

[pj-news-ticker]