ಭದ್ರಾವತಿ : ಬೊಮ್ಮನಕಟ್ಟೆ ನಿವಾಸಿ, ಶಿಕ್ಷಕರು ಆದ ಎ.ತಿಪ್ಪೇಸ್ವಾಮಿ ಅವರು ಕುವೆಂಪು ವಿವಿಗೆ ಸಲ್ಲಿಸಿದ ಮಧ್ಯಕಾಲೀನ ಭಕ್ತಿ ಚಳುವಳಿ ಮತ್ತು ಕನ್ನಡ ಸಾಹಿತ್ಯ ಎಂಬ ವಿಷಯ ಆಧಾರಿತ ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ಪಿ ಎಚ್ ಡಿ ನೀಡಿದೆ.
ಇವರಿಗೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತೀಯ ಸಹ ಪ್ರಾಧ್ಯಾಪಕರಾದ ಡಾ.ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಮಾರ್ಗದರ್ಶನವನ್ನು ನೀಡಿರುತ್ತಾರೆ.
ಎ ತಿಪ್ಪೇಸ್ವಾಮಿ ಅವರಿಗೆ ಸಮಾಜದ ಮುಖಂಡರಾದ ಚನ್ನಪ್ಪ, ಬದರಿ ನಾರಾಯಣ್ ನರಸಿಂಹಮೂರ್ತಿ, ಪೇಪರ್ ಸುರೇಶ್, ಡಿ ಎಸ್ ಎಸ್ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ. ರಂಗನಾಥ್. ನೌಕರರ ಒಕ್ಕೂಟದ ಜಯಪ್ಪ .ಎಸ್ ಉಮಾ. ಈಶ್ವರಪ್ಪ ಅಭಿನಂದನೆ ಸಲ್ಲಿಸಿದ್ದಾರೆ