ಭದ್ರಾವತಿ : ಜಿಂಕೆ ಮಾಂಸ ತಂದು ಮಾರುತ್ತಿದ್ದ ಮೂವರು ಆರೋಪಿ ಹಾಗೂ 20 ಕೆ.ಜಿ ಜಂಕೆ ಮಾಂಸವನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ.
ಕಾಚಗೊಂಡನಹಳ್ಳಿಯ ಆರ್ಮುಗ ಪ್ರಮುಖ ಆರೋಪಿಯಾಗಿದ್ದು ನಾಪತ್ತೆಯಾಗಿದ್ದಾನೆ. ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖರ್, ಹೊಸಸಿದ್ದಾಪುರ ಮೂರ್ತಿ ಬಂಧಿತರು.
ಜಿಂಕೆ ಬೇಟೆಯಾಡಿ ಮಾಂಸ ತಂದು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮಿಲಿಟರಿ ಕ್ಯಾಂಪ್, ಬಸ್ ನಿಲ್ದಾಣ, ಸಂತೆ ಮೈದಾನದ ಬಳಿ ಮಾಂಸದ ಜತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 20 ಕೆ.ಜಿ ಮಾಂಸ ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಆರೋಪಿ ಆರ್ಮುಗ ಸಿಕ್ಕರೆ ಬೇಟೆಯಾಡಿದ ಪ್ರದೇಶ, ಇತರೆ ವಿಚಾರಗಳು ತಿಳಿಯಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
