Trending

ಭದ್ರಾವತಿಯ ಗೊಂದಿ ಗ್ರಾಮವನ್ನೆ ಬೆಚ್ಚಿಬೀಳಿಸಿದ ಚಿರತೆ : 12 ದಿನಗಳಲ್ಲಿ ಎರಡನೇ ಬೇಟೆ

Spread the love

ಭದ್ರಾವತಿ: ಜನವಸತಿ ಪ್ರದೇಶದಲ್ಲಿ ಸಾಕು ಪ್ರಾಣಿಗಳ ಮೇಲೆ ಹರಿಹಾಯ್ತಿರುವ ಚಿರತೆ ದಾಳಿ ಮತ್ತೆ ಮುಂದುವರಿದಿದ್ದು, ನಿನ್ನೆ ರಾತ್ರಿ ಭದ್ರಾವತಿಯ ಗೊಂದಿ ಗ್ರಾಮದ ರೈತನೊಂದು ಕುರಿಯನ್ನು ಬೇಟೆ ಮಾಡಿ ತಿಂದು ಹಾನಿಗೊಳಿಸಿದೆ.

ಈ ಘಟನೆಯು ಗ್ರಾಮದಲ್ಲಿ ಭಯಭೀತಿಯ ವಾತಾವರಣವನ್ನು ನಿರ್ಮಿಸಿದೆ. ಕಳೆದ 12 ದಿನದಲ್ಲಿ ಇದೇ ಚಿರತೆ ಈ ಭಾಗದಲ್ಲಿ ಎರಡನೇ ಬಾರಿ ದಾಳಿ ಮಾಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ವಿವರಗಳ ಪ್ರಕಾರ, ಈ ತಿಂಗಳು ಜನವರಿ 13 ರಂದು ಪತ್ರಕರ್ತ ಗಂಗಾನಾಯ್ಕ ಗೊಂದಿ  ಅವರ ಮನೆಯ ಅಂಗಳದಲ್ಲಿ ಮಲಗಿದ್ದ ಜರ್ಮನ್ ಶಫರ್ಡ್ ಸಾಕು ನಾಯಿಯನ್ನು ಚಿರತೆ ಕೊಂದು, ಮನೆಯ ಅಣತಿ ದೂರದಲ್ಲಿ ಬೇಟೆಮಾಡಿ ತಿಂದು ಹೋದ ಘಟನೆಯೂ ಈ ದಾಳಿಯೊಂದಾಗಿದೆ.

ಅರಣ್ಯ ಇಲಾಖೆಯವರು ಚಿರತೆ ಪ್ರವೇಶ ಮಾಡುವ ದಾರಿಗೆ ಬೋನುಗಳನ್ನು ಸ್ಥಾಪಿಸಿರುವುದರಲ್ಲಿಗೆ ಚಿರತೆ ಮಾರ್ಗ ಬದಲಾಯಿಸಿ ಗ್ರಾಮದ ಒಳಗೆ ಸುತ್ತಾಡುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಮಧ್ಯರಾತ್ರಿ ನರಸಿಂಹೇಗೌಡರ ಮನೆಯ ಅಂಗಳದ ಬಳಿ ರಾತ್ರಿ ಸುಮಾರು ೨ ಗಂಟೆಗೆ ಮನೆಯಿಂದ ಹೊರಬಂದಾಗ ಚಿರತೆಯನ್ನು ನೋಡಿ ಗಾಬರಿಯಾಗಿ ಕೂಗಿ  ಕೊಂಡಿದ್ದಾರೆ. ಹತ್ತಿರದವರು ಗಲಾಟೆ ಮಾಡಿದಾಗ ಮಾತ್ರ ಚಿರತೆ ಕಾಡು ಸೇರಿಕೊಂಡಿದೆ.

ನಿನ್ನೆ ರಾತ್ರಿ ಮತ್ತೊಮ್ಮೆ ಚಿರತೆ ರೈತನೋರ್ವನ ಕುರಿಯನ್ನು ಹತ್ಯೆ ಮಾಡಿ, ಪೂರ್ತಿ ದೇಹವನ್ನೂ ತಿಂದು ಹೋಗಿರುವ ಘಟನೆ ದಾಖಲಾಗಿದೆ.

ಗ್ರಾಮದಲ್ಲಿ ಭಯದ ವಾತಾವರಣ

ಗೊಂದಿ ಗ್ರಾಮದ ಸುತ್ತಮುತ್ತಲು ಆಗಾಗ ಕಾಣಿಸಿಕೊಂಡು ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಚಿರತೆ ದಾಳಿಗೆ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಹೊತ್ತು ಜನರು ಭಯದಿಂದ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಅಲ್ಲದೆ ಸಾಕು ಪ್ರಾಣಿಗಳ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿದೆ.

ಸದ್ಯಕ್ಕೆ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿರುವ ಚಿರತೆ ಮಕ್ಕಳು ಸೇರಿದಂತೆ ಒಬ್ಬಂಟಿಯಾಗಿ ಓಡಾಡುವ ಜನಗಳ ಮೇಲೆ ದಾಳಿ ಮಾಡಿ ಅನಾಹುತವಾದರೆ ಹೊಣೆಗಾರರು ಯಾರು? ಎಂಬ ಆತಂಕದಲ್ಲಿ ಈ ಗ್ರಾಮದ ಜನರು ಬದುಕುತ್ತಿದ್ದಾರೆ, ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಭಯಗ್ರಸ್ತ ವಾತಾವರಣ ನಿರ್ಮೂಲನೆ ಮಾಡಬೇಕೆಂದು ವಿನಂತಿಸಿದ್ದಾರೆ

[pj-news-ticker]