ಸುಳ್ಯ: ಗೋಬಿ ಮಂಚೂರಿಯ ಖಾದ್ಯದ ಬಗ್ಗೆ ತನಿಖೆ/ಪರೀಕ್ಷೆ ನಡೆಸುವಂತೆ ಹೇಳಲಾಗಿತ್ತು. ಅದರಂತೆ ಪರೀಕ್ಷೆ ನಡೆಸಲಾಗಿದ್ದು, ವರದಿಯನ್ನು ಪರಿಶೀಲನೆ ನಡೆಸಿ ಯಾವ ಕ್ರಮಕೈಗೊಳ್ಳಬೇಕು ಎಂಬುದನ್ನು ಸೋಮವಾರ ತಿಳಿಸುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುಳ್ಯದಲ್ಲಿ ಪತ್ರಕರ್ತರ ಜೊತೆಗೆ ಮತನಾಡಿದ ಅವರು, ರಾಜ್ಯದಲ್ಲೂ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ನಿಷೇಧ ಆಗಲಿದೆಯಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಈಗಾಗಲೇ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ನಿಷೇಧ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಬರುತ್ತಿರುವ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇಲ್ಲ. ವರದಿ ನೋಡಿಕೊಂಡು ಏನು ಮಾಡಬೇಕು, ಆ ಬಗ್ಗೆ ಸೋಮವಾರ ತಿಳಿಸುತ್ತೇವೆ ಎಂದು ಉತ್ತರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಬಗ್ಗೆ ಉತ್ತರಿಸಿದ ಸಚಿವರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸುಸಜ್ಜಿತ ಆಸ್ಪತ್ರೆ ಬೇಡಿಕೆ ಏನಾಗಿದೆ ಎಂಬುದನ್ನು ಆರೋಗ್ಯಾಧಿಕಾರಿಗಳ ಬಳಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.