Trending

ಎಸ್‌.ಬಂಗಾರಪ್ಪ ಲಕ್ಕಿ ಕಾರಿನ ನಂಬರ್‌ ಪಡೆದ ಗೀತಾ ಶಿವರಾಜ್‌ಕುಮಾರ್‌!

Spread the love

ಶಿವಮೊಗ್ಗ: ತಂದೆಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿರುವ ಮಾಜಿ ಮುಖ್ಯಮಂತ್ರಿ ದಿ. ಸಾರೇಕೊಪ್ಪ ಬಂಗಾರಪ್ಪ ಅವರ ಪುತ್ರಿ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್‌ಕುಮಾರ್‌ ಈಗ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಮಾಡಿ, ಪ್ರಚಾರಕ್ಕೆ ಕಾರನ್ನೂ ಖರೀದಿ ಮಾಡಿದ್ದಾರೆ.

ಈ ಕಾರಿನ ನಂಬರ್‌ ಈಗ ಆಕರ್ಷಣೆಗೆ ಕಾರಣವಾಗಿದೆ. ತಮ್ಮ ತಂದೆಯ ಲಕ್ಕಿ ಕಾರಿನ ನಂಬರ್‌ ಅನ್ನೇ ಹೊಸ ಕಾರಿಗೂ ಪಡೆದಿದ್ದು ಅದರಲ್ಲೇ ಪ್ರಚಾರ ಮಾಡಲಿದ್ದಾರೆ.

ಬಂಗಾರಪ್ಪ ಅವರು ಸಿಎಂ ಆದ ನಂತರ ಟಾಟಾ ಸಫಾರಿ ಕಾರನ್ನು ಖರೀದಿ ಮಾಡಿದ್ದರು. ಅದರ ನಂಬರ್‌ 1179 ಆಗಿತ್ತು. ನಂತರ ಖರೀದಿ ಮಾಡಿದ ಕಾರುಗಳಿಗೂ ಅದೇ ನಂಬರ್‌ ಪಡೆದಿದ್ದರು. ಪುತ್ರ ಮಧು ಬಂಗಾರಪ್ಪ ಕೂಡ ಅವರ ಕಾರುಗಳಿಗೆ ಅದೇ ನಂಬರ್‌ ಬಳಸುತ್ತಾರೆ. ಈಗ ಪುತ್ರಿ ಗೀತಾ ಕೂಡ ಅದೇ ನಂಬರಿನ ಮೊರೆ ಹೋಗಿದ್ದಾರೆ.

ಬಂಗಾರಪ್ಪನವರಿಗೆ ಸೋಲಿಲ್ಲದ ಸರದಾರನ ಪಟ್ಟ ಕೊಟ್ಟಿದ್ದ ಕಾರಿನ ನಂಬರ್‌ ಗೀತಾ ಅವರ ಪಾಲಿಗೆ ಅದೃಷ್ಟ ತರುವುದೇ ಕಾದುನೋಡಬೇಕಿದೆ.ಹೊಸ ಮನೆ ಮುಂದೆ ಮಹೀಂದ್ರಾ ಕಂಪನಿಯ ಎಕ್ಸ್‌ಯೂವಿ 700 ಕಾರು ಬಂದಿದ್ದು ಸೋಮವಾರದಿಂದ ಅ ಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ.

ಈಗಾಗಲೇ ಕಾರ್ಯಕರ್ತರು ಸಹ ಸಂಭ್ರಮ ವ್ಯಕ್ತಪಡಿಸಿದ್ದು ಅಭ್ಯರ್ಥಿ ಸ್ವಾಗತಕ್ಕೆ ಅಣಿಯಾಗಿದ್ದಾರೆ. 2014ರಲ್ಲಿ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್‌ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ.

[pj-news-ticker]