Breaking
Sat. Apr 20th, 2024

ರವಿವಾರವೇ ಟಿಕೆಟ್ ಹಂಚಿಕೆ ಅಂತಿಮ; ಬಿ.ಎಸ್.ಯಡಿಯೂರಪ್ಪ

By Mooka Nayaka News Mar 9, 2024
Spread the love

ಶಿವಮೊಗ್ಗ: ನಾಳೆ (ಮಾರ್ಚ್ 10) ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸಂಜೆ ಚುನಾವಣಾ ಸಭೆಯಿದೆ. ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸುತ್ತಾರೆ. ಈಗಾಗಲೇ ಜೆ.ಪಿ.ನಡ್ಡಾ, ಅಮಿತ್ ಶಾ ನೇತೃತ್ವದಲ್ಲಿ ಒಂದು ಸುತ್ತಿನ ಸಭೆಯಾಗಿದೆ. ನಾಳೆ ಬಹುತೇಕ ಅಂತಿಮವಾಗಲಿದೆ ಎಂದು ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಟಿಕೇಟ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಾರಿಗೆ ಯಾವುದು ಕೊಡುತ್ತಾರೆ ಗೊತ್ತಿಲ್ಲ. ಇನ್ನೂ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಬಹುತೇಕ ಅಂತಿಮವಾಗಲಿದೆ ಎಂದರು.

ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಂತೋಷ, ಅಭ್ಯರ್ಥಿ ಯಾರಾದರೂ ನಿಲ್ಲಲ್ಲೇಬೇಕಲ್ಲ ಎಂದರು.ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ಇಲ್ಲದ ವಿಚಾರಕ್ಕೆ ಮಾತನಾಡಿ, ಆ ರೀತಿ‌ ಯಾವುದೇ ಚರ್ಚೆ ಇಲ್ಲ. ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಬಿಎಸ್ ವೈ ಹೇಳಿದರು.

Related Post