ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತದ ಬಳಿ ಚರ್ಚ್ ಎದುರಿದ್ದ ಹೂವಿನ ಅಂಗಡಿಗಳನ್ನು ಪೊಲೀಸರು ತೆರವು ಮಾಡಿಸುವ ಮೂಲಕ ಸಂಚಾರಕ್ಕೆ ಅನುವು ಕಲ್ಪಿಸಿದ್ದಾರೆ.
ಹೂವಿನ ಮಾರುಕಟ್ಟೆ ಇದ್ದ ಜಾಗದಲ್ಲಿ ಸ್ಮಾರ್ಟ್ ಸಿಟಿಯಿಂದ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡಕ್ಕಾಗಿ ಹೂವಿನ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ತಾತ್ಕಾಲಿಕ ಹೂವಿನ ಶೆಡ್ ಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಆದರೆ ಇವು ದಿನೇ ದಿನೇ ವಿಸ್ತಾರವಾಗುತ್ತಾ ಕಾಲೇಜಿಗೆ ತೆರಳುವ ಮಕ್ಕಳಿಗೆ, ಜನರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ಮಾಡಿದ್ದವು. ರಸ್ತೆಯ ಅರ್ಧದವರೆಗೆ ಅಂಗಡಿಗಳನ್ನು ನಿರ್ಮಿಸಿ ಸಂಚಾರಕ್ಕೆ ತೊಂದರೆ ಮಾಡುತ್ತಿದ್ವು, ಇವುಗಳೊಟ್ಟಿಗೆ ಇತರೆ ಕೆಲವು ವಸ್ತುಗಳ ಮಾರಾಟದ ಅಂಗಡಿಗಳೂ ಅಲ್ಲಿ ತಲೆ ಎತ್ತಿದ್ದವು. ಸಂಚಾರಿ ಪೊಲೀಸರು ಅಂಗಡಿಗಳನ್ನ ತೆರವುಗೊಳಿಸಿದ್ದಾರೆ.
ಅಂಗಡಿಯನ್ನ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
