ಶಿವಮೊಗ್ಗ : ನಗರದ ಅಕ್ಷರ ಶಾಲೆ 2025–26ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಸಾಧಿಸಿದೆ.
ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಶಾಲೆಯ ಶೈಕ್ಷಣಿಕ ಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ವಿದ್ಯಾರ್ಥಿಗಳಲ್ಲಿ ಕೆಲವರು ಅತ್ಯುತ್ತಮ ಅಂಕಗಳನ್ನು ಪಡೆದು ಮೆರೆದಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿನಿ ಸಾನ್ವಿ ಎಸ್ ನಡುಕೇರಿ 94.80%, ಧನುಷ್ ಕೆ.ವಿ.ಎಸ್. 94.80% ಹಾಗೂ ಮರಿಯಮ್ ಬಕ್ಷ್ 90% ಅಂಕಗಳನ್ನು ಗಳಿಸಿದ್ದಾರೆ.

ಅಂಕಗಳ ಹಂಚಿಕೆಯಲ್ಲಿ 90% ಮೇಲ್ಪಟ್ಟ ಅಂಕಗಳನ್ನು 3 ವಿದ್ಯಾರ್ಥಿಗಳು, 80% ಮೇಲ್ಪಟ್ಟ ಅಂಕಗಳನ್ನು 16 ವಿದ್ಯಾರ್ಥಿಗಳು, 70% ಮೇಲ್ಪಟ್ಟ ಅಂಕಗಳನ್ನು 16 ವಿದ್ಯಾರ್ಥಿಗಳು ಹಾಗೂ 60% ಮೇಲ್ಪಟ್ಟ ಅಂಕಗಳನ್ನು 10 ವಿದ್ಯಾರ್ಥಿಗಳು ಪಡೆದಿದ್ದಾರೆ.
ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರ ಕಾರಣವೆಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
