Trending

ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಬಾರದು; ಈಶ್ವರಪ್ಪಗೆ ಹೆಬ್ಬಾರ್ ತಿರುಗೇಟು

Spread the love

ಶಿರಸಿ: ಕೆ.ಎಸ್. ಈಶ್ವರಪ್ಪ ಅವರು ಹಿರಿಯರು. ಅವರು ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರಿಗೆ ಕಲ್ಲು ಹೊಡೆಯಬಾರದು ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ತಿರುಗೇಟು‌ ನೀಡಿದರು.

ಉತ್ತರ ಕನ್ನಡದ ಶಿರಸಿ ಗುಡ್ನಾಪುರದಲ್ಲಿ ರವಿವಾರ ಕದಂಬೋತ್ಸವ ಹಿನ್ನಲೆಯಲ್ಲಿ ಕದಂಬ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಬಳಿ ಮಾತನಾಡಿದರು.

ಈಶ್ವರಪ್ಪ ಅವರ ಹೇಳಿಕೆಯನ್ನು ರಾಜ್ಯ ಬಿಜೆಪಿ‌ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೂ ಹಿರಿಯರಾದವರು ಇಂಥ ಮಾತನಾಡಬಾರದು. ಹಿಂದೆ ಬಿಜೆಪಿ ಸರಕಾರ ಬರುವಾಗ ಆಗಿನ‌ ಶಾಸಕರಿಗೆ ಈಶ್ವರಪ್ಪ ಅವರು ಎಷ್ಟು ಕೋಟಿ‌ ಕೊಟ್ರಿ ಎಂದು ಕೇಳಬೇಕಾಗುತ್ತದೆ ಎಂದರು.

ಹಿಮಾಚಲ‌ ಪ್ರದೇಶದಲ್ಲಿ ಎಷ್ಟು‌ಕೊಟ್ಟಿದ್ರಿ?  ಉತ್ತರ ಪ್ರದೇಶದಲ್ಲಿ ಅಡ್ಡ ಮತದಾನ‌ ಎಷ್ಟಾಯಿತು ಎಂದು‌ ಕೇಳಬೇಕಾಗುತ್ತದೆ ಎಂದು ಖಾರವಾಗಿ‌ ಕೇಳಿದರು.

[pj-news-ticker]