Trending

ಸಾಗರ : ಗದ್ದೆ ನಾಟಿ ವೇಳೆ ರೈತ ಸಾವು

Spread the love

ಸಾಗರ : ಗದ್ದೆಯಲ್ಲಿ ನಾಟಿ ಮಾಡುವ ವೇಳೆ ವೇಳೆ ಕಾಲು ಜಾರಿ ಬಿದ್ದು ರೈತನೋರ್ವ ಸಾವನ್ನಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಕಣ್ಣೂರು ಗ್ರಾಮದಲ್ಲಿ ನಡೆದಿದೆ.

ಸತ್ಯನಾರಾಯಣ ಕೈಸೋಡಿ (50) ಮೃತ ದುರ್ದೈವಿ. ಕಣ್ಣೂರಿನ ತನ್ನ ಗದ್ದೆಯಲ್ಲಿ ನಾಟಿ ಮಾಡುವ ವೇಳೆ ಸತ್ಯನಾರಾಯಣ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ.

ಬಿದ್ದ ತಕ್ಷಣ ಸತ್ಯನಾರಾಯಣ್ ಗೆ ಸಮೀಪದ ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದ್ರೆ, ಅಷ್ಟೊತ್ತಿಗಾಗಲೇ ಸತ್ಯನಾರಾಯಣ್ ಸಾವನ್ನಪ್ಪಿದ್ದರು.

ರೈತ ಸತ್ಯನಾರಾಯಣ ಇಂದು ಬೆಳಗ್ಗೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.

[pj-news-ticker]