Trending

ಶಾಲೆಗೆ ರಜೆ ಎಂದು ಕೆರೆಗೆ ಈಜಲು ಹೋಗಿ ಜೀವ ಕಳೆದುಕೊಂಡ ಬಾಲಕ

Spread the love

ಚಿಕ್ಕಮಗಳೂರು: ಮಳೆಗೆಂದು ಶಾಲೆಗೆ ರಜೆ ನೀಡಿದರೆ ಇತ್ತ ಬಾಲಕನೋರ್ವ ಕೆರೆಗೆ ಈಜಲು ಹೋಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಕುಂಬಾರಕಟ್ಟೆ ಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ

ತಾಲೂಕಿನ ಬ್ಯಾಗಡೇಹಳ್ಳಿ ಗ್ರಾಮದ ರಂಜಿತ್ (15) ಮೃತ ಬಾಲಕನಾಗಿದ್ದಾನೆ.

ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಶುಕ್ರವಾರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿತ್ತು, ಅದರಂತೆ ಶಾಲೆಗೆ ರಜೆ ಇದ್ದ ಕಾರಣ ರಂಜಿತ್ ನಗರದ ಕುಂಬಾರಕಟ್ಟೆ ಕೆರೆಗೆ ಈಜಲು ತೆರಳಿದ್ದಾನೆ ಈ ವೇಳೆ ನೀರಿನ ಸೆಳೆತಕ್ಕೆ ರಂಜಿತ್ ನೀರುಪಾಲಾಗಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡ ಕೆರೆಯಲ್ಲಿದ್ದ ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ.

ಘಟನೆ ಸಂಬಂಧ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]