ಹೊಸನಗರ: ಶಿವಮೊಗ್ಗ, ಕುಂದಾಪುರ, ಉಡುಪಿ ಸಂಪರ್ಕದ ಹುಲಿಕಲ್ ಘಾಟಿ ರಸ್ತೆಯಲ್ಲಿ ಸಾಲು ಸಾಲು ಮರಗಳು ರಸ್ತೆಗೆ ಬಿದ್ದಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಶಿವಮೊಗ್ಗ ಗಡಿಭಾಗದಿಂದ ಹೊಸಂಗಡಿ ಕಡೆಗೆ ಹೆಚ್ಚಿನ ಮರಗಳು ರಸ್ತೆಗೆ ಬಿದ್ದರೆ ಕೆಲವು ಮರಗಳು ರಸ್ತೆಗೆ ವಾಲಿ ನಿಂತಿವೆ.
ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವಡೆ ಕೆಲವು ದಿನಗಳ ಹಿಂದೆಯೇ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದ್ದರು ಕೂಡ ರಸ್ತೆಯಿಂದ ಮರಗಳನ್ನು ತೆರವುಗೊಳಿಸಿಲ್ಲ. ಅಲ್ಲದೇ ಕಾಂಕ್ರೀಟ್ ರಸ್ತೆಯ ಅಂಚಿನಲ್ಲಿ ಗುಂಡಿ ಬಿದ್ದಿದ್ದು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನು ಘಾಟಿಯುದ್ದಕ್ಕೂ ಚರಂಡಿ ತುಂಬಿಕೊಂಡಿದ್ದು ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದು ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು, ವಾಹನ ಸವಾರರು ಒತ್ತಾಯಿಸಿದ್ದಾರೆ.
