Trending

ಭದ್ರಾವತಿಯ ಸಿದ್ದಾರ್ಥ ಅಂಧರ ಕೇಂದ್ರದ ವಿದ್ಯಾರ್ಥಿಗಳಿಗೆ ಟಾಕಿಂಗ್ ವಾಚ್ ಮತ್ತು ವಾಕಿಂಗ್ ಸ್ಟಿಕ್ ವಿತರಣೆ

Spread the love

ತರೀಕೆರೆ: ಇಲ್ಲಿನ ರೋಟರಿ ಶಾಲೆಯ ಆವರಣದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ  ಅಂಧ ವಿದ್ಯಾರ್ಥಿಗಳಿಗಾಗಿ ವಾಕಿಂಗ್ ಸ್ಟಿಕ್ ಹಾಗೂ ಟಾಕಿಂಗ್ ವಾಚ್ ಗಳ ವಿತರಣೆ ಹಾಗೂ ನೇತ್ರದಾನ ಮತ್ತು ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಭದ್ರಾವತಿಯ ಸಿದ್ದಾರ್ಥ ಅಂಧರ ಕೇಂದ್ರದ ಸುಮಾರು 22 ಜನ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ವಾಚ್ ಮತ್ತು ವಾಕಿಂಗ್ ಸ್ಟಿಕ್ (ಊರು ಗೋಲು)ಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಿ.ಸಿ. ರಾಕೇಶ್, ಕಾರ್ಯದರ್ಶಿ ರವಿ ಪುರದಪ್ಪ, ಇನ್ನರ್ ವೀಲ್ ಕ್ಲಬ್ಬಿನ ಅಧ್ಯಕ್ಷೆ ಉಮಾದೇವಿ ದಯಾನಂದ್, ಕಾರ್ಯದರ್ಶಿ ಸುನಿತಾ ಕಿರಣ್, ನೇತ್ರ ತಜ್ಞ ಡಾ. ಪ್ರಜಕ್ತ, ರೆಡ್ ಕ್ರಾಸ್ ಸಂಸ್ಥೆಯ ಡಾ.ದಾರಾನೇಂದ್ರ ದಿನಕರ್, ಭದ್ರಾವತಿಯ ನಿವೃತ್ತ ಪ್ರಾಚಾರ್ಯರು ಹಾಗೂ ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದೃಷ್ಟಿ ವಿಕಲಚೇತನರಿಗೆ ಟಾಕಿಂಗ್ ವಾಚ್ ಮತ್ತು ವಾಕಿಂಗ್ ಸ್ಟಿಕ್ಗಳನ್ನು ಒದಗಿಸಿದಂತ ತರೀಕೆರೆಯ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ  ಹಾಗೂ ಕಾರ್ಯದರ್ಶಿಗಳಾದ ಎಂ.ಗುರುಮೂರ್ತಿ ಅಭಿನಂದಿಸಿದ್ದಾರೆ.

[pj-news-ticker]