Trending

ಎರಡು ವರ್ಷ ಶಿಕ್ಷಣದಲ್ಲಿ ಹರುಷ ಎಂಬ ಕಾರ್ಯಕ್ರಮದಡಿ ಮಕ್ಕಳಿಗೆ ಸ್ವಾಗತ : ಮಧು ಬಂಗಾರಪ್ಪ

Spread the love

ಶಿವಮೊಗ್ಗ: “ಗುರುವಾರ ಶಾಲೆಗಳು ಪ್ರಾರಂಭವಾಗುವುದರಿಂದ ನನ್ನ ಇಲಾಖೆಯಿಂದ ಎರಡು ವರ್ಷ ಶಿಕ್ಷಣದಲ್ಲಿ ಹರುಷ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ. ಜೊತೆಗೆ ನಾಳೆ ಶಿಕ್ಷಣ ಇಲಾಖೆಯ ಹಲವು‌ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುತ್ತದೆ” ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.

ನಗರದಲ್ಲಿ ಮಾಧ್ಯಮದರೂಂದಿಗೆ ಮಾತನಾಡಿದ ಅವರು, ಕೋವಿಡ್ ಬಗ್ಗೆ ಯಾರೂ ಗಾಬರಿ ಪಡುವ ಅಗತ್ಯ ಇಲ್ಲ. ಶಿಕ್ಷಣ ಇಲಾಖೆಗೆ ಯಾವುದೇ ಮಾರ್ಗಸೂಚನೆ ಇಲ್ಲಿಯವರೆಗೆ ಇಲ್ಲ. ಜವಾಬ್ದಾರಿ ಮರೆಯಬಾರದು. ಎರಡು ವರ್ಷ ಎಲ್ಲರೂ ಅನುಭವಿಸಿದ್ದೇವೆ. ಈ ಸಮಯದಲ್ಲಿ ಎಲ್ಲರೂ ಜವಾಬ್ದಾರಿಯಿಂದ ಇರಬೇಕಾಗುತ್ತದೆ” ಎಂದರು.

“ನಮ್ಮ ಇಲಾಖೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಸರ್ಕಾರದ ಆದೇಶವನ್ನು ಪಾಲಿಸಬೇಕಾದ ಕೆಲಸವನ್ನು ನಾವು ಮಾಡಬೇಕಿದೆ. ಮಕ್ಕಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮಾರ್ಗಸೂಚಿಯನ್ನ ಪಾಲಿಸಬೇಕು” ಎಂದು ಹೇಳಿದರು.

ಕಮಲ್ ಹಾಸನ್ ಹೇಳಿಕೆ ವಿಚಾರ: ನಾನು ಸಹ ಪತ್ರಿಕೆಗಳಲ್ಲಿ ನೋಡಿದೆ. ಯಾವ ವಿಚಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಭಾಷೆ ಕನ್ನಡದ ಬಗ್ಗೆ ನಮಗೆ ಗೌರವ ಇದೆ. ಬೇರೆಯವರು ಹೇಳಿ ತಿಳಿದುಕೊಳ್ಳುವ ಅವಶ್ಯಕತೆ ನಮಗಿಲ್ಲ. ಕಮಲ್​ ಹಾಸನ್ ಯಾವ ಕಟೆಂಟ್​ನಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಜರ್ಮನ್​ ಭಾಷೆಯಲ್ಲೂ ಸಹ ತುಂಬಾ ಸಂಸ್ಕೃತ ಇದ್ದಾವೆ. ಆ ರೀತಿ ಯಾಕೆ ಹೋಲಿಕೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಮ್ಮ ಕನ್ನಡ, ನಮ್ಮ ರಕ್ತ ಕನ್ನಡ” ಎಂದರು.‌

ಮಂಗಳೂರಲ್ಲಿ ಯುವಕನ ಕೊಲೆ ವಿಚಾರ: “ಕೊಲೆ ಯಾಕೆ ಆಗಿದೆ ಎನ್ನುವುದನ್ನು ಪೊಲೀಸರು ತನಿಖೆ ಮಾಡುತ್ತಾರೆ. ಬೇರೆ ಆ್ಯಂಗಲ್​ನಲ್ಲಿ ಎಲ್ಲವನ್ನು ಯಾಕೆ ನೋಡ್ತೀರಾ? ತಪ್ಪು ಮಾಡಿದವರ ಮೇಲೆ ಕ್ರಮ ಆಗುತ್ತದೆ. ಪ್ರತೀಕಾರನ ಏನೋ, ನೋಡಬೇಕು. ಎಲ್ಲವನ್ನು ಎಲ್ಲದಕ್ಕೂ ಜೋಡಿಸಬಾರದು. ತಪ್ಪಿತಸ್ಥರ ವಿರುದ್ದ ಕ್ರಮ ಆಗುತ್ತೆ” ಎಂದು ತಿಳಿಸಿದರು.

[pj-news-ticker]