ರಾಮಸಂದ್ರ: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಸ್ಫೋಟದಿಂದ ಸಂಭವಿಸಿದ ಅಗ್ನಿ ಅವಘಡ ದಲ್ಲಿ ಮೂವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ದುರಂತ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದಾರೆ. ಫ್ಯಾಕ್ಟರಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಅವರ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.ಪರ್ಫ್ಯೂಮ್ ಕೆಮಿಕಲ್ ಸ್ಫೋಟಗೊಂಡ ಪರಿಣಾಮ ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿಯುತ್ತಿದೆ.