ಶಿವಮೊಗ್ಗ: ಸಿಡಿಮದ್ದು ಸ್ಪೋಟಗೊಂಡು ಇಬ್ಬರಿಗೆ ಗಾಯಗಳಾದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಫೆ. 18ರ ಭಾನುವಾರ ಸಂಭವಿಸಿದೆ.
ಶಿರಾಳಕೊಪ್ಪದಲ್ಲಿನ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದ್ದು, ಹಾವೇರಿಯ ಕುಟುಂಬವೊಂದು ಸಂತೆಗಾಗಿ ಬಂದಿದ್ದ ಸಂದರ್ಭ ಅವರು ಸಿಡಿಮದ್ದು ತಂದಿದ್ದರು. ಸಂತೆಯ ವೇಳೆ ಸಿಡಿಮದ್ದನ್ನು ಅಂಗಡಿ ಬಳಿ ಇಟ್ಟಿದ್ದು, ಈ ವೇಳೆ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡಿದೆ.
ಹಾವೇರಿಯ ಉಮೇಶ್ ಹಾಗೂ ರೂಪ ದಂಪತಿ ತಂದಿದ್ದ ಬ್ಯಾಗ್ ನಲ್ಲಿ ಕಾಡುಪ್ರಾಣಿಗಳ ಬಲಿಗೆ ಬಳಸುವ ಸಿಡಿಮದ್ದು ತಂದಿದ್ದರು.ಈ ಘಟನೆಯ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.