ಶಿವಮೊಗ್ಗ: ಒಂದು ವರ್ಷದ ಮಗುವೊಂದು ಆಟ ಆಡುವ ವೇಳೆ ಮೀನು ನುಂಗಿದ ಘಟನೆ ನಡೆದಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೀನು ಹೊರತೆಗೆದಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜಿನಹಳ್ಳಿ ಒಂದು ವರ್ಷದ ಪ್ರತೀಕ್ ಮೀನು ನುಂಗಿದ ಮಗು. ಮಗು ಕೈಯಲ್ಲಿ ಪೋಷಕರು ಆಟ ಆಡಲು ಮೀನು ನೀಡಿದ್ದರು. ಆಟ ಆಡುವಾಗ ವೇಳೆ ಮಗು ಏಕಾಏಕಿ ಮೀನು ನುಂಗಿದೆ.ಮಗುವನ್ನು ಕೂಡಲೇ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಮೀನು ಹೊರ ತೆಗೆದ ವೈದ್ಯರು ಮಗುವಿನ ರಕ್ಷಣೆ ಮಾಡಿದ್ದಾರೆ.