ಬೆಂಗಳೂರು: ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಳಿಗಳ ಮೇಲೆ ನಡೆಯುತ್ತಿದ್ದವನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕದ ಬಳಿ ನಡೆದಿದೆ.
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 19 ವರ್ಷದ ಬಿ ಟೆಕ್ ವಿದ್ಯಾರ್ಥಿ ಶಿವ ಸೂರ್ಯ ಮೃತ ದುರ್ದೈವಿ, ಇಯರ್‌ಫೋನ್‌ಗಳನ್ನು ಹಾಕಿಕೊಂಡು ರೈಲ್ವೇ ಹಳಿಗಳ ಮೇಲೆ ನಡೆದುಕೊಂಡುಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.
ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿದ್ದ ಯುವಕ ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳವು ಯಲಹಂಕ ರೈಲು ನಿಲ್ದಾಣದಿಂದ ದೇವನಹಳ್ಳಿ ಕಡೆಗೆ 2 ಕಿಮೀ ದೂರದಲ್ಲಿದೆ. ಇಯರ್‌ಫೋನ್‌ಗಳು ಕಿವಿಗೆ ಹಾಕಿಕೊಂಡಿದ್ದರಿಂದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅವನು ತನ್ನ ಸ್ನೇಹಿತರಿಗೆ ಕರೆ ಮಾಡಿ ಕೆಲವೇ ನಿಮಿಷಗಳಲ್ಲಿ ಹಾಸ್ಟೆಲ್‌ಗೆ ಹಿಂತಿರುಗುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಆತನ ಬಳಿ ಐಪಾಡ್ ಕೂಡ ಪೊಲೀಸರಿಗೆ ಸಿಕ್ಕಿದೆ. ಮೃತ ವಿದ್ಯಾರ್ಥಿ ಮ್ಯೂಸಿಕ್ ಕೇಳುತ್ತಿದ್ದ ಅಥವಾ ಮೊಬೈಲ್‌ನಲ್ಲಿ ಯಾರೊಂದಿಗಾದರೂ ಮಾತನಾಡುತ್ತಿದ್ದ ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.
ವಿದ್ಯಾರ್ಥಿಯು ಇಯರ್‌ಫೋನ್ ಪ್ಲಗ್ ಇನ್ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇಯರ್‌ಫೋನ್ ಹಾಕಿದ್ದರಿಂದ ಅವನಿಗೆ ರೈಲು ಬಂದ ಶಬ್ದ ಕೇಳದಿರಬಹುದು. ರೈಲು ತನ್ನ ಹತ್ತಿರ ಬಂದಿದ್ದನ್ನು ಗಮನಿಸಿದ ನಂತ ಆತ ಪಕ್ಕಕ್ಕೆ ಸರಿದಿದ್ದಾನೆ, ಆದರೆ ಈ ವೇಳೆ ರೈಲು ಆತನಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ದೇವನಹಳ್ಳಿ ಕಡೆಯಿಂದ ಬರುತ್ತಿತ್ತು ಎಂದು ರೈಲ್ವೆ ಎಸ್ಪಿ ಡಾ.ಕೆ.ಎಸ್.ಸೌಮ್ಯ ಲತಾದಿ ತಿಳಿಸಿದ್ದಾರೆ. ಸೂರ್ಯನ ತಲೆಗೆ ತೀವ್ರತರವಾದ ಗಾಯಗಳಾಗಿದ್ದು, ತಲೆಬುರುಡೆಯ ಎಡಭಾಗವು ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ಹೇಳಲಾಗಿದೆ. ಮೃತದೇಹವನ್ನು ಹಳೆ ಮದ್ರಾಸ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಯಿತು.