Trending

ಹಾಸನಾಂಬೆ ಹುಂಡಿ ಎಣಿಕೆ: 9 ದಿನದಲ್ಲಿ 12.63 ಕೋಟಿ ರೂ. ಹಣ, 51 ಗ್ರಾಂ ಚಿನ್ನ

Spread the love

ಹಾಸನ : ಹಾಸನದ ಹಾಸನಾಂಬೆ ದೇವಿ ಉತ್ಸವ ನಿನ್ನೆ ಸಂಪನ್ನಗೊಂಡಿದೆ. 11 ದಿನಗಳ ಉತ್ಸವದಲ್ಲಿ 9 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬರೋಬ್ಬರಿ 20 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದುಕೊಂಡಿದ್ದಾರೆ.ಕಳೆದ ವರ್ಷ 14 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು.

ಈ ವರ್ಷ ಶಕ್ತಿ ಯೋಜನೆಯ ಎಫೆಕ್ಟ್ನಿಂದಾಗಿ 20 ಲಕ್ಷದ 40 ಸಾವಿರ ಭಕ್ತರು ಜಗನ್ಮಾತೆಯ ದರ್ಶನ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಹುಂಡಿ ಹಣ ಬಿಟ್ಟು ಕೇವಲ ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ 9.69 ಕೋಟಿಯಷ್ಟು ಆದಾಯ ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯನ್ನು ಸೇರಿಸಿದರೆ 12,63,83,808 ಆದಾಯ ಸಂಗ್ರಹವಾಗಿದೆ. ಇಷ್ಟೊಂದು ಪ್ರಮಾಣದ ಆದಾಯ ಹಾಸನಾಂಬೆ ದರ್ಶನದ ಇತಿಹಾಸದಲ್ಲೇ ದಾಖಲೆಯಾಗಿದೆ.

ಇಂದು 500 ಜನರಿಂದ 7 ಗಂಟೆಗಳ ಕಾಲ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನ ವೇಳೆ 12,63,83,808 ರೂ. ಕಾಣಿಕೆ ಸಂಗ್ರವಾಗಿದೆ. ಇನ್ನು 1000, 300 ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 9,67,27,180 ರೂಪಾಯಿ ಹಾಗೂ ದೇವಸ್ಥಾನದ ಹುಂಡಿಯಲ್ಲಿ 2,55,97,567 ರೂ. ಸೇರಿಕೊಂಡು 2024ರ ಹಾಸನಾಂಬೆ ದರ್ಶನೋತ್ಸವದಿಂದ ಒಟ್ಟು 12,63,83,808 ರೂಪಾಯಿ ಆದಾಯ ಬಂದಿದೆ. ಇದರ ಜೊತೆಗೆ 51 ಗ್ರಾಂ ಚಿನ್ನ ಹಾಗೂ 913 ಗ್ರಾಂ ಬೆಳ್ಳಿ ಕಾಣಿಕೆಯಾಗಿದೆ ಬಂದಿದೆ. ಹಾಸನಾಂಬೆ ದರ್ಶನದ ಇತಿಹಾಸದಲ್ಲೇ ಹರಿದುಬಂದ ದಾಖಲೆಯ ಆದಾಯ ಇದಾಗಿದೆ.

ಈ ವರ್ಷದ ಹಾಸನಾಂಬೆಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಮುಂದಿನ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಅಂದ್ರೆ 15 ದಿನಗಳ ಕಾಲ ಹಾಸನಾಂಬೆ ಉತ್ಸವಕ್ಕೆ ಮುಹೂರ್ತ ನಿಗದಿಯಾಗಿದೆ.

[pj-news-ticker]