ಶಿವಮೊಗ್ಗ : ಬಿಜೆಪಿಯ ಭೀಷ್ಮ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ಲಾಲ್ ಕೃಷ್ಣ ಅಡ್ವಾಣಿ ಅವರು ಈಗಿನ ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಿದ್ದಾರೆ. ಅವರಿಗೆ ಭಾರತರತ್ನ ಸಿಕ್ಕಿದೆ ಅಂತ ಕೇಳಿದ್ದಕ್ಕೆ ನಮ್ಮ ಎರಡು ಕಿವಿಗಳು ಪವಿತ್ರ ಆಗಿದೆ. ತುಂಬಾ ಸಂತೋಷವಾಗಿ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಅವರ ಮೇಲೆ ಒಂದು ಆಪಾದನೆ ಬಂದಾಗ ಆಪಾದನೆ ಮುಕ್ತ ಆಗೋವರೆಗೂ ಕೂಡ ಲೋಕಸಭೆಗೆ ಹೋಗಲ್ಲ ಎನ್ನುವ ಮಹಾಪುರುಷ ಎಲ್.ಕೆ ಅಡ್ವಾಣಿಯವರು.ನಮ್ಮೆಲ್ಲರಿಗೂ ಕೂಡ ಅವರು ಹಿರಿಯರು ಮಾರ್ಗದರ್ಶಕರು. ಅವರಿಗೆ ಭಾರತ ರತ್ನ ನೀಡಿದ್ದಕ್ಕೆ ಭಾರತ ರತ್ನಕ್ಕೆ ಒಳ್ಳೆಯ ಗೌರವ ಸಿಕ್ಕಿದೆ ಎಂದು ಕೆ.ಎಸ್ ಈಶ್ವರಪ್ಪ ನುಡಿದರು.