Breaking
Tue. Oct 8th, 2024

ಶಿವಮೊಗ್ಗ: ಕಾರು – ಬೈಕ್ ಡಿಕ್ಕಿಃ ಜೊಮೆಟೊ ಸಪ್ಲಾಯರ್ ಗಂಭೀರ

By Mooka Nayaka News Mar 3, 2024
Spread the love

ಶಿವಮೊಗ್ಗ : ಇಲ್ಲಿನ‌ ಜಯನಗರ ಪೊಲೀಸ್ ಠಾಣೆ ಎದುರು ಇಂದು ರಾತ್ರಿ 8:30ರ ವೇಳೆ ಸಂಭಿಸಿದ ಕಾರು- ಬೈಕ್ ಅಪಾಘತದಲ್ಲಿ ಬೈಕ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.

ನೆಹರು ಸ್ಟೇಡಿಯಂ ಕಡೆಯಿಂದ ಕಾರು ಬರುತ್ತಿತ್ತು. ತಿಲಕ್ ನಗರದ ಬಸ್ ನಿಲ್ದಾಣದ ಕಡೆಯಿಂದ ಬಂದು ಆರ್ ಟಿ ಓ ಕಚೇರಿ ರಸ್ತೆಗೆ ಬೈಕ್ ಸವಾರ ತಿರುಗುತ್ತಿದ್ದ ವೇಳೆ ಸರ್ಕ್ ಲ್ ನಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಜೊಮೆಟೊ ಸಪ್ಲಯರ್ ಆಗಿದ್ದು, ತೀವ್ರ ಪೆಟ್ಟಾಗಿದೆ.

ಸ್ಥಳೀಯರು ಕೂಡಲೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು. ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related Post