ನವದೆಹಲಿ : ಭಾರತದಲ್ಲಿ ಅತಿ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ದೀಪಾವಳಿ ಪ್ರಮುಖವಾದುದು. ಈ ಹಬ್ಬದ ಸಂದರ್ಭದಲ್ಲಿ ಬ್ಯಾಂಕುಗಳು ಸತತ ನಾಲ್ಕು ದಿನ ಬಂದ್ ಆಗಿರುತ್ತವೆ. ಇದರಲ್ಲಿ ಭಾನುವಾರವೂ ಒಂದು ಒಳಗೊಂಡಿದೆ.
ಅಕ್ಟೋಬರ್ 31ರಂದು ಆರಂಭವಾಗಿ ನವೆಂಬರ್ 3ರವರೆಗೂ ಸತತ ರಜೆಗಳಿವೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ 15 ರಜೆಗಳಿದ್ದವು. ಮುಂಬರುವ ನವೆಂಬರ್ ತಿಂಗಳಲ್ಲಿ ರಜಾ ದಿನಗಳ ಸಂಖ್ಯೆ 13 ಇದೆ. ಕರ್ನಾಟಕದಲ್ಲಿ ಒಟ್ಟು 9 ದಿನ ಬ್ಯಾಂಕುಗಳಿಗೆ ರಜೆ ಇದೆ. ಈ ಪಟ್ಟಿಯಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳು ಸೇರಿವೆ.
ದೀಪಾವಳಿ ಹಬ್ಬ ಸಂದರ್ಭದಲ್ಲಿ ಬ್ಯಾಂಕ್ ರಜಾದಿನಗಳು
- ಅಕ್ಟೋಬರ್ 31, ಗುರುವಾರ: ಕಾಳಿ ಪೂಜೆ, ನರಕ ಚತುರ್ದಶಿ
- ನವೆಂಬರ್ 1, ಶುಕ್ರವಾರ: ದೀಪಾವಳಿ ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ
- ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ಗೋವರ್ಧನ ಪೂಜೆ, ವಿಕ್ರಮ್ ಸಂವತ್ ಹೊಸ ವರ್ಷದ ಆರಂಭ
- ನವೆಂಬರ್ 3, ಭಾನುವಾರ
2024ರ ನವೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
- ನವೆಂಬರ್ 1, ಶುಕ್ರವಾರ: ದೀಪಾವಳಿ
- ನವೆಂಬರ್ 2, ಶನಿವಾರ: ಬಲಿಪಾಡ್ಯಮಿ
- ನವೆಂಬರ್ 3: ಭಾನುವಾರದ ರಜೆ
- ನವೆಂಬರ್ 9: ಎರಡನೇ ಶನಿವಾರ
- ನವೆಂಬರ್ 10: ಭಾನುವಾರದ ರಜೆ
- ನವೆಂಬರ್ 17: ಭಾನುವಾರದ ರಜೆ
- ನವೆಂಬರ್ 18, ಸೋಮವಾರ: ಕನಕದಾಸ ಜಯಂತಿ
- ನವೆಂಬರ್ 23: ನಾಲ್ಕನೇ ಶನಿವಾರ
- ನವೆಂಬರ್ 24: ಭಾನುವಾರದ ರಜೆ
