ಬೆಂಗಳೂರು: ಇಂಡಿಗೋ ವಿಮಾನದ ಪೈಲಟ್ ಡ್ಯೂಟಿ ಸಮಯ ಮುಗಿದಿದೆ ಎಂದು ಹೇಳಿ ಪ್ರಯಾಣಿಕರಿಂದ ತುಂಬಿದ್ದ ವಿಮಾನವನ್ನು ಹಾರಿಸಲು ನಿರಾಕರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈಲರ್ ಆಗಿದೆ.
ಹತ್ತು ದಿನಗಳ ಹಿಂದೆ ಪುಣೆಯಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೈಲಟ್‌ನನ್ನು ಟೀಕಿಸಿದ್ದಾರೆ. ಆದರೆ ವಿಮಾನಯಾನ ಉದ್ಯಮದಲ್ಲಿರುವವರು ಪೈಲಟ್ ಕಾನೂನಿನ ಪ್ರಕಾರ ನಡೆದುಕೊಂಡಿದ್ದಾರೆ. ಏಕೆಂದರೆ ದೈನಂದಿನ ಕರ್ತವ್ಯ ಸಮಯ ಮೀರಿ ಕೆಲಸ ಮಾಡಿದರೆ ವಿಮಾನಯಾನ ನಿಯಂತ್ರಕರು ದಂಡ ವಿಧಿಸಬಹುದು ಎಂದಿದ್ದಾರೆ.
ಪೈಲಟ್, ತನ್ನ ಡ್ಯೂಟಿ ಟೈಮ್ ಮುಗಿದಿದೆ. ವಿಮಾನ ಟೇಕಾಫ್ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಜಗಳವಾಡುವ ಮತ್ತು ಮನವಿ ಮಾಡುವ ಸುಮಾರು 200 ಪ್ರಯಾಣಿಕರಿಂದ ತುಂಬಿದ್ದ ಫ್ಲೈಟ್‌ನೊಳಗೆ ಆಘಾತಕ್ಕೊಳಗಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಏತನ್ಮಧ್ಯೆ, ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ಹಾರಿಸುವಂತೆ ಒತ್ತಾಯಿಸುತ್ತಿರುವಾಗ ಪೈಲಟ್ ಕಾಕ್‌ಪಿಟ್ ಬಾಗಿಲನ್ನು ಮುಚ್ಚುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
ಅಂತಿಮವಾಗಿ ಗಂಟೆಗಳ ನಂತರ ವಿಮಾನವನ್ನು(6E 361) ಬೇರೆ ಪೈಲಟ್‌ನಿಂದ ಹಾರಿಸಲಾಯಿತು ಮತ್ತು ಐದು ಗಂಟೆಗಳ ನಂತರ ಬೆಂಗಳೂರು ತಲುಪಿತು.