Trending

ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಗಾಡಿಯನ್ನೇ ಎತ್ತಿದ ಬಾಲಕಿ; Video Viral

Spread the love

ಮಂಗಳೂರು: ಅಪಘಾತದಲ್ಲಿ ತಾಯಿ ಮೇಲೆ ಬಿದ್ದ ಆಟೋವನ್ನು ಪುಟ್ಟ ಬಾಲಕಿಯೊಬ್ಬಳು ಎತ್ತಿ ಹಾಕಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ದಾಟುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಏಕಾಏಕಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು, ಪರಿಣಾಮ ರಭಸದಿಂದ ಬಂದ ಆಟೋ ಮಹಿಳೆಯ ಮೇಲೆ ಮಗುಚಿ ಬಿದ್ದಿದೆ.

ಇದನ್ನು ಕಂಡ ಬಾಲಕಿ ಓಡಿ ಬಂದಿದ್ದು, ತಕ್ಷಣ ಆಟೋವನ್ನೇ ಮೇಲೆಕ್ಕೆ ಎತ್ತಿ ಹಾಕಿದ್ದಾಳೆ. ಇವಿಷ್ಟೂ ದೃಶ್ಯವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಮಗಳನ್ನು ಕರೆತರಲು ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.

ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಆಟೋ ಎತ್ತಿ ತಾಯಿಯನ್ನು ಮಗಳು ಮೇಲಕ್ಕೆತ್ತಿದ್ದಾಳೆ. ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

ಬಾಲಕಿ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

 

[pj-news-ticker]