ಸಾಗರ: ತಾಲ್ಲೂಕು ಆಡಳಿತ,ಸಮಾಜ ಕಲ್ಯಾಣ ಇಲಾಖೆ,ನಗರಸಭೆ ಮತ್ತು ವಿವಿಧ ಸಂಘಟನೆ ಗಳ ಆಶ್ರಯದಲ್ಲಿ ಇಂದು ಸುರ್ವರ್ಣ ಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಬುಡಕಟ್ಟು ಮಕ್ಕಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸುರೇಶ್ ಜಂಬಾನಿ ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಉಪವಿಭಾಗಧಿಕಾರಿ ಯತೀಶ್. ಆರ್., ಡಿವೈಎಸ್.ಪಿ ಗೋಪಾಲಕೃಷ್ಣ .ಟಿ. ನಾಯಕ್, ಚಂದ್ರ ಶೇಖರ್ ನಾಯಕ್, ತಾಲೂಕು ಪಂಚಾಯತ್ ಇ.ಓ.ಶೆಣೈ, ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಸಹನೆ ಹಾಗೂ ಹಲವು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.