ಶಿವಮೊಗ್ಗ: ದೊಡ್ಮನೆ ಕುಟುಂಬದ ಕುಡಿ ನಟ ಯುವ ರಾಜಕುಮಾರ್ ಅವರ ವಿಚ್ಚೇದನ ವಿಚಾರ ಇದೀಗ ದೊಡ್ಡ ಸುದ್ದಿಯಾಗುತ್ತಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ನಟ ಯುವ ಮತ್ತು ಪತ್ನಿ ಶ್ರೀದೇವಿ ಅವರು ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಇದರ ಬಗ್ಗೆ ಸುದ್ದಿಗಾರರು ಶಿವಮೊಗ್ಗದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಕೇಳಿದಾಗ, ನಟ ಯುವ ವಿಚ್ಛೇದನ ವಿಚಾರದ ಬಗ್ಗೆ ಗೊತ್ತಿಲ್ಲ, ಸತ್ಯವಾಗಿಯೂ ಗೊತ್ತಿಲ್ಲ ಎಂದರು.
“ಇವಾಗ ನಿಮ್ಮಿಂದ ವಿಚಾರ ಗೊತ್ತಾಗಿದೆ. ಬೇಸರ ಇದೆ, ಗೊತ್ತಿದ್ದು ಮಾತಾನಾಡಬೇಕು. ಗೊತ್ತಿಲ್ಲದೆ ಮಾತಾನಾಡಬಾರದು. ಅದು ಅವರ ಬದುಕು, ಗೊತ್ತಾದ ಮೇಲೆ ವಿಚಾರ ಮಾಡುತ್ತೇವೆ ಎಂದರು.
ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, ಇದು ನಮ್ಮ ಮನೆಯ ವಿಚಾರ. ಇಲ್ಲಿವರೆಗೂ ಅದರ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ವಿಚಾರ ಮಾಡುತ್ತೇವೆ. ಈ ವಿಚಾರದಲ್ಲಿ ನಾವು ಇಬ್ಬರು ಮಾತಾನಾಡಬಾರದು ಎಂದರು.