ಶಿವಮೊಗ್ಗ: ನಗರದಲ್ಲಿ ಇಂದು 7 ಬಾಂಗ್ಲಾ ಪ್ರಜೆಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಜಯನಗರ ಠಾಣೆಯ ಪೊಲೀಸರು 7 ಬಾಂಗ್ಲಾ ಪ್ರಜೆಗಳನ್ನು ನಗರದಲ್ಲಿ ಪತ್ತೆ ಹಚ್ಚಿದ್ದಾರೆ.
ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಟ್ಟಡ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದಂತ ಜನರಲ್ಲಿ ಬಾಂಗ್ಲಾ ಪ್ರಜೆಗಳು ಇರುವುದಾಗಿ ತಿಳಿದು ಬಂದಿತ್ತು. ಹೀಗಾಗಿ ಜಯನಗರ ಠಾಣೆಯ ಪೊಲೀಸರು ದಾಳಿ ನಡೆಸಿ 7 ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪತ್ತೆಯಾದಂತ ಬಾಂಗ್ಲಾದೇಶದ ಪ್ರಜೆಗಳ ಬಳಿಯಲ್ಲಿ ಮಂಗಳೂರು ವಿಳಾಸವಿರುವಂತ ಆಧಾರ್ ಕಾರ್ಡ್ ಕೂಡ ಪತ್ತೆಯಾಗಿದೆ. ಇವರನ್ನು ಕಟ್ಟಡ ಕೆಲಸಕ್ಕಾಗಿ ಮೇಸ್ತ್ರಿಯೊಬ್ಬರು ಕರೆದುಕೊಂಡು ಬಂದಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ವಿಚಾರಣೆಯನ್ನ ಜಯನಗರ ಠಾಣೆಯ ಪೊಲೀಸರು ನಡೆಸುತ್ತಿದ್ದಾರೆ.