ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ 13 ವರ್ಷದ ಸಿಂಹ ಸರ್ವೇಶ್ ಅನಾರೋಗ್ಯದಿಂದ ಮೃತಪಟ್ಟಿದೆ.
ಸರ್ವೇಶ್ ನನ್ನು ನಾಲ್ಕು ವರ್ಷದ ಹಿಂದೆ ಬನ್ನೇರುಘಟ್ಟದಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಸಫಾರಿ ಪ್ರಿಯರಿಗೆ ಇದು ಫೇವರೇಟ್ ಆಗಿತ್ತು.
ಬುಧವಾರ ವಾಂತಿ ಮಾಡಿಕೊಂಡಿದ್ದ ಸಿಂಹಕ್ಕೆ ಚಿಕಿತ್ಸೆ ನೀಡಲಾಗಿತ್ತು. ಹಿಮೋ ಫ್ರೋಟೋಜೋನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಸಿಂಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.